ಕೃತಿ: ಸಾಹಿತ್ಯ ಸಂಪದ
ಲೇ: ಅಂಶಿ ಪ್ರಸನ್ನ ಕುಮಾರ್
ಪ್ರ: ವಿಸ್ಮಯ ಬುಕ್‌ಹೌಸ್, ಮೈಸೂರು
ಪು:260
ಬೆ: ₹300
ಸಂ: 0821–2952545

ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರ ಈ ಕೃತಿ ಸಾಹಿತ್ಯ ಜಗತ್ತಿಗೊಂದು ಪುಟ್ಟ ಕೈಪಿಡಿ. ಮುನ್ನುಡಿಯಲ್ಲಿ ಸಿ.ಪಿ.ಕೆ ಹೇಳುವಂತೆ ಒಂದು ಅಪರೂಪದ ಕೃತಿ. ಇದನ್ನು ಯಾವ ರೂಪಕ್ಕೆ ಸೇರಿಸಬೇಕೆಂದು ಹೇಳುವುದು ಕಷ್ಟ. ಇಲ್ಲಿ ವ್ಯಕ್ತಿ ಪರಿಚಯವಿದೆ. ಸಾಹಿತ್ಯದ ಕೃತಿಗಳ ಕಿರುನೋಟವಿದೆ. ಕಾದಂಬರಿ, ಕಥೆ, ಕವಿತೆಗಳ ಸಣ್ಣ ಪರಿಚಯವಿದೆ. ಒಟ್ಟಾರೆಯಾಗಿ ನಾಡಿನ ವಿವಿಧ ಲೇಖಕರು, ಸಾಹಿತಿಗಳ ಕೃತಿಗಳನ್ನು ಪರಿಚಯಿಸಿಕೊಡುವ ಕೃತಿ ಎನ್ನಬಹುದು.

ಸುಮಾರು 160 ಭಿನ್ನವಾದ ಕೃತಿಗಳ ಪರಿಚಯ ಇದರಲ್ಲಿದೆ. ಇನ್ನೊಂದು ವಿಶೇಷವೆಂದರೆ ಅಷ್ಟೇನೂ ಜನಪ್ರಿಯವಲ್ಲದ, ಗಂಭೀರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಾಕಷ್ಟು ಹೊಸ ಲೇಖಕರನ್ನು ಪರಿಚಯಿಸಿದ್ದಾರೆ. ಪ್ರತಿ ಪುಟದಲ್ಲೊಂದು ಹೊಸ ಕೃತಿ, ಲೇಖಕ, ಪ್ರಕಾಶಕರ ವಿವರ ಹೊಂದಿರುವ ಪರಿಚಯಾತ್ಮಕ ಲೇಖನವಿದೆ. ಸಾಹಿತ್ಯ, ವ್ಯಕ್ತಿ/ಜೀವನ ಚಿತ್ರಗಳು, ಕಾದಂಬರಿಗಳು,ಕಥೆಗಳು, ಕವಿತೆಗಳು, ಜಾನಪದ, ಲಲಿತ ಪ್ರಬಂಧಗಳು/ಲೇಖನಗಳು, ಪ್ರವಾಸ, ಆರೋಗ್ಯ, ಇತರೆ ಎಂಬ ಪ್ರತ್ಯೇಕ ವಿಭಾಗದಡಿಯಲ್ಲಿ ಆಯಾ ಕೃತಿಗಳನ್ನು ಪರಿಚಯಿಸಲಾಗಿದೆ.

ಚಾಮರಾಜನಗರದ ವೆಂಕಟರಮಣ ಶಾಸ್ತ್ರಿಗಳು ಬರೆದ ‘ಲೋಕಸೇವಾನಿರತ ಅಂಬಳೆ ಅಣ್ಣಯ್ಯ ಪಂಡಿತರ ಚರಿತ್ರೆ’ ಎಂಬ ಕೃತಿಯನ್ನು ಅಂಶಿ ಇಲ್ಲಿ ಪರಿಚಯಿಸುತ್ತಾರೆ. ಮೈಸೂರಿನಲ್ಲಿ ಅಣ್ಣಯ್ಯ ಪಂಡಿತರ ವೃತ್ತವಿದೆ. ನಗರ ಪಾಲಿಕೆ ನಿರ್ವಹಿಸುವ ಉಚಿತ ವಿದ್ಯಾರ್ಥಿನಿಲಯವಿದೆ. ಆದರೆ ಪಂಡಿತರು ಯಾರೆಂದು ಬಹುತೇಕರಿಗೆ ಗೊತ್ತಿಲ್ಲ. ಅವರನ್ನು ಪರಿಚಯ ಮಾಡಿಕೊಡುವ ಕೃತಿಯನ್ನು ತಮ್ಮ ಪುಸ್ತಕದಲ್ಲಿ ಅಂಶಿ ಮಾಡಿದ್ದಾರೆ ಮತ್ತು ಈ ಕೆಲಸ ಬಹಳ ಸೊಗಸಾಗಿದೆ.

ತ.ಸು.ಶಾಮರಾಯರ ವಿಭಿನ್ನ ಕೃತಿ ‘ನೆನಪಿನ ಅಲೆಗಳು’, ಡಾ.ಪ್ರಧಾನ್ ಗುರುದತ್ತರ ‘ಅನುವಾದ–ಆಧುನಿಕ ಜಗತ್ತಿನಲ್ಲಿ’ ಕೃತಿ ಕುರಿತಾದ ಸೊಗಸಾದ ಪರಿಚಯವಿದೆ. ಪ್ರೊ ಮಲ್ಲೇಪುರಂ ಜಿ.ವೆಂಕಟೇಶ ಅವರ ‘ತೌಲನಿಕ ಸಾಹಿತ್ಯಾಧ್ಯಯನ’ ಕೃತಿಯ ಪರಿಚಯವಿದೆ. ಅದೇ ರೀತಿ ಡಾ.ದೊಡ್ಡರಂಗೇಗೌಡರ ಭಾವಗೀತೆಗಳ ಸಂಕಲನ ‘ಗಂಧವತೀ ಪೃಥ್ವೀ’ ಕುರಿತಾದ ಒಂದು ಪರಿಚಯ ಲೇಖನವಿದೆ. ಬಹಳ ವಿರಳವಾಗಿ ಹೆಸರು ಕೇಳಿರುವ, ಆದರೆ ಗಟ್ಟಿಯಾದ ಸಾಹಿತ್ಯ ಕೃತಿ ರಚಿಸಿರುವ ಅನೇಕ ಲೇಖಕರನ್ನು ಈ ಪುಸ್ತಕದಲ್ಲಿ ಅಂಶಿ ಪರಿಚಯಿಸಿಕೊಟ್ಟಿದ್ದಾರೆ. ರಾಜ್ಯದ ಒಂದಷ್ಟು ಪ್ರಕಾಶಕರ, ಲೇಖಕರ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಆಯ್ದ ಬರಹಗಾರರ ಕುರಿತಾದ ಸಣ್ಣ ಮಾಹಿತಿಗೆ ಕೈಪಿಡಿಯಂತಹ ಕೃತಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.