ಈ ದುರಿತ ಕಾಲದಲಿ ಪರಸ್ಪರ ಪ್ರೀತಿಸೋಣ ಮತ್ತು ಸದಾ ಪ್ರೀತಿಸುತ್ತಲೇ ಇರೋಣ
ಮನೆಯೊಳಗೆ ಯಾರೂ ಜಗಳವಾಡದಿರುವ ನಿರ್ಣಯ ತೆಗೆದುಕೊಳ್ಳೋಣ. ಈ ಬೇಯುತಿರುವ ಕಾಲದಲಿ ಪ್ರೀತಿಯೊಂದೇ ನಮ್ಮನ್ನು ಬದುಕಿಸಬಲ್ಲದು. ಸಂಗಾತಿಗಳಲಿ, ಮಕ್ಕಳಲಿ, ಪ್ರಾಣಿ ಪಕ್ಷಿಗಳಲಿ ಒಟ್ಟು ಜೀವಮಂಡಲವು ನಮ್ಮ ಹೃದಯದ ಅನುಕಂಪೆಯಲಿ ತೊಯ್ದು ಹೋಗಲಿ. ಯಾರಿಗೆ ಗೊತ್ತು ಈ ಕೊರೋನಾ ಯಾರನೆಲ್ಲಾ ಬಲಿಹಾಕಲೆಂದು ಹೊಂಚು ಹಾಕುತಿದೆಯೆಂದು.Last Updated 29 ಮಾರ್ಚ್ 2020, 6:23 IST