ಕುಪ್ಪಳಿ | ಚಳಿಗಾಲದಲ್ಲಿ ಕವಿ ಊರಲ್ಲಿ...
ಹಸಿರು ತೆಪ್ಪಗೇ ಮಲಗಿದ ದಾರಿಯಲ್ಲಿ ಮಂಜು ಶುಭ್ರವಾದ ಒಂದು ಕನಸಿನಂತೆ ಹರಡಿಕೊಳ್ಳುತ್ತಲೇ ಇತ್ತು, ವನರಾಶಿಗಳು ಸಣ್ಣಗೇ ತೂಕಡಿಸುತ್ತ ‘ಇನ್ನೊಂದಷ್ಟು ಹೊತ್ತು ಹಾಗೇ ಮಲಗಿರುತ್ತೇವೆ, ಸೂರ್ಯ ಎಬ್ಬಿಸಿದ ಕೂಡಲೇ ಎದ್ದುಬಿಡುತ್ತೇವೆ’ ಎಂದು ಸುರಿಯುತ್ತಿರುವ ಮಂಜಿನ ಕಂಬಳಿಯನ್ನು ಬೆಚ್ಚಗೇ ಹೊದ್ದುಕೊಂಡು ಮಲಗಿಯೇಬಿಟ್ಟವು.Last Updated 24 ಡಿಸೆಂಬರ್ 2022, 19:30 IST