ನವದೆಹಲಿ: ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಕಾರಿನ ಮಾದರಿಗಳ ಮುಂದಿನ ಎರಡೂ ಸೀಟುಗಳಿಗೆ ಕಡ್ಡಾಯವಾಗಿ ಏರ್‌ಬ್ಯಾಗ್ ಅಳವಡಿಸಬೇಕು ಎಂಬ ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಾಲ್ಕು ತಿಂಗಳ ಮಟ್ಟಿಗೆ ಮುಂದೂಡಿದೆ.

ಈಗಿರುವ ನಿಯಮಗಳ ಅನ್ವಯ, ಮಾರುಕಟ್ಟೆಯಲ್ಲಿ ಇರುವ ಕಾರುಗಳಲ್ಲಿ ಡ್ರೈವರ್ ಆಸನಕ್ಕೆ ಏರ್‌ಬ್ಯಾಗ್ ಅಳವಡಿಕೆ ಕಡ್ಡಾಯ. ಕೋವಿಡ್ ಸಾಂಕ್ರಾಮಿಕವನ್ನು ಗಮನದಲ್ಲಿ ಇರಿಸಿಕೊಂಡು, ಮುಂದಿನ ಇನ್ನೊಂದು ಆಸನಕ್ಕೂ ಏರ್‌ಬ್ಯಾಗ್ ಕಡ್ಡಾಯಗೊಳಿಸುವ ನಿಯಮದ ಜಾರಿಯನ್ನು ಡಿಸೆಂಬರ್ 31ರವರೆಗೆ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಭಾರತೀಯ ಆಟೊಮೊಬೈಲ್ ತಯಾರಕರ ಸಂಘವು (ಎಸ್‌ಐಎಎಂ) ಕಾಲಾವಕಾಶ ಕೇಳಿತ್ತು. ಹೊಸದಾಗಿ ಮಾರುಕಟ್ಟೆಗೆ ಬರುವ ಮಾದರಿಗಳಲ್ಲಿ ಎರಡೂ ಆಸನಗಳಿಗೆ ಏರ್‌ಬ್ಯಾಗ್ ಅಳವಡಿಕೆ ಈಗಾಗಲೇ ಕಡ್ಡಾಯ ಆಗಿದೆ’ ಎಂದು ಅವರು ತಿಳಿಸಿದರು. ಹಾಲಿ ಇರುವ ಮಾದರಿಗಳಲ್ಲಿ ಮುಂದಿನ ಎರಡೂ ಆಸನಗಳಲ್ಲಿ ಏರ್‌ಬ್ಯಾಗ್ ಅಳವಡಿಕೆಯು ಆಗಸ್ಟ್ 31ರ ನಂತರ ಕಡ್ಡಾಯ ಎಂದು ಸಚಿವಾಲಯವು ಈ ಹಿಂದೆ ಹೇಳಿತ್ತು.

ಇದನ್ನೂ ಓದಿ... ಚಿನ್ನ ಆಮದು ₹ 51 ಸಾವಿರ ಕೋಟಿಗೆ ಹೆಚ್ಚಳ: ವಾಣಿಜ್ಯ ಸಚಿವಾಲಯ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.