ನೋಯ್ಡಾ: ಇಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೋ 2023 ಇವೆಂಟ್ನಲ್ಲಿ ಹುಂಡೈ ಮೋಟಾರ್ ಇಂಡಿಯಾ ತನ್ನ ಹೊಸ ಅತ್ಯಾಧುನಿಕವಾದ ಎಲೆಕ್ಟ್ರೀಕ್ ಕಾರ್ ‘ಹುಂಡೈ ಅಯಾನಿಕ್ 5ಇವಿ’ (Ioniq 5 EV) ಅನಾವರಣಗೊಳಿಸಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ಈ ಇವಿ ಕಾರನ್ನು ಅನಾವರಣಗೊಳಿಸಿದರು.

ಈ ಕಾರಿನ ಆರಂಭಿಕ ಎಕ್ಸ್ ಶೋರೂಂ ಬೆಲೆ ₹44.95 ಲಕ್ಷ ಇದೆ ಎಂದು ಹೇಳಲಾಗಿದ್ದು, ಮೂರು ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷವೆಂದರೆ ಐಒನಿಕ್ ಇವಿ ಕಾರು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ, 631 ಕಿ.ಮೀವರೆಗೆ ಪ್ರಯಾಣಿಸುತ್ತದೆ ಎಂದು ಕಂಪನಿ ಹೇಳಿದೆ.

ಸಮಾರಂಭದಲ್ಲಿ ಮಾತನಾಡಿರುವ ಹುಂಡೈ ಮೋಟಾರ್ ಇಂಡಿಯಾ ಸಿಇಒ ಉನ್ಸೂ ಕಿಮ್ ಅವರು, ಭವಿಷ್ಯದ ಅಗತ್ಯಗಳಿಗಾಗಿ ಅತ್ಯಂತ ಉನ್ನತ ತಂತ್ರಜ್ಞಾನದೊಂದಿಗೆ ನಾವು ಬದಲಾವಣೆ ಆಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಹುಂಡೈ ಅಯಾನಿಕ್ 5ಇವಿ ಇದೊಂದು ಐಷಾರಾಮಿ ಎಲೆಕ್ಟ್ರೀಕ್ ಕಾರು. ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ 8 ಸ್ಪೀಕರ್ಗಳುಳ್ಳ ಬೋಸ್ ಸೌಂಡ್ ಸಿಸ್ಟಮ್ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.