ನವದೆಹಲಿ: ಕಿಯಾ ಕಂಪನಿಯು ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್‌ಓವರ್ ‘ಇವಿ6’ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದು, ಆ ಮೂಲಕ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆ ಪ್ರವೇಶಿಸುವುದಾಗಿ ಘೋಷಿಸಿದೆ.

ಮೇ 26ರಿಂದ ‘ಇವಿ6’ ಬುಕಿಂಗ್ ಆರಂಭ ಆಗಲಿದ್ದು, ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. 2022ರಲ್ಲಿ ಕೇವಲ 100 ಕಾರುಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ.

‘ಜಾಗತಿಕವಾಗಿ ಹೆಚ್ಚು ಜನಪ್ರಿಯ ಆಗಿರುವ ವಿದ್ಯುತ್ ಚಾಲಿತ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದೇವೆ. ಅಲ್ಟ್ರಾ–ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ, ಗರಿಷ್ಠ ತಂತ್ರಜ್ಞಾನ ಇರುವ ಒಳಾಂಗಣವನ್ನು ಇದು ಹೊಂದಿರಲಿದೆ’ ಎಂದು ಕಿಯಾ ಇಂಡಿಯಾದ ಸಿಇಒ ಟೇ ಜಿನ್ ಪಾರ್ಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.