ಕೇಪ್ಟೌನ್ (ದಕ್ಷಿಣ ಆಫ್ರಿಕಾ): ಕಡಿಮೆ ತೂಕ ಹಾಗೂ ಅಧಿಕ ಕಾರ್ಯಕ್ಷಮತೆಯ 4X4 ಟ್ರ್ಯಾಕ್ಟರ್ ‘ಓಜಾ’ ವನ್ನು ಮಹೀಂದ್ರ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಇಲ್ಲಿ ಮಂಗಳವಾರ ಬಿಡುಗಡೆ ಮಾಡಿತು. ಇದರೊಂದಿಗೆ ಬ್ಯಾಟರಿ ಚಾಲಿತ ಥಾರ್ ಹಾಗೂ ಪಿಕಪ್ ವಾಹನವನ್ನು ಪರಿಚಯಿಸಿತು.

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಸಮ್ಮುಖದಲ್ಲಿ ಕಂಪನಿಯು ಈ ವಾಹನಗಳನ್ನು ಬಿಡುಗಡೆ ಮಾಡಿತು. ಕಂಪನಿಯ ಕಾರುಗಳಲ್ಲಿ ರೆಹಮಾನ್ ಸಂಯೋಜನೆಯ ಸಂಗೀತಗಳನ್ನು ಬಳಸುವ ಕುರಿತು ಕಂಪನಿ ಒಪ್ಪಂದ ಮಾಡಿಕೊಂಡಿದೆ. ಜತೆಗೆ ಹರ್ಮನ್ ಮತ್ತು ಡಾಲ್ಬಿ ಧ್ವನಿವರ್ಧಕ ಕಂಪನಿಗಳ ಉತ್ಪನ್ನಗಳನ್ನೂ ಮಹೀಂದ್ರ ತನ್ನ ಹೊಸ ಮಾದರಿಯ ಕಾರುಗಳಲ್ಲಿ ಅಳವಡಿಸುವ ಕುರಿತು ಒಡಂಬಡಿಕೆ ಮಾಡಿಕೊಂಡಿರುವುದನ್ನು ಕಂಪನಿಯ ಅಧಿಕಾರಿಗಳು ತಿಳಿಸಿದರು.

ಇದಕ್ಕೂ ಮೊದಲು ಓಜಾ ಎಂಬ ಹೊಸ ತಂತ್ರಜ್ಞಾನದ ಟ್ರ್ಯಾಕ್ಟರ್ ಅನ್ನು ಕಂಪನಿ ಬಿಡುಗಡೆ ಮಾಡಿತು. ಜಪಾನ್ನಲ್ಲಿರುವ ಮಿಟ್ಸುಬಿಷಿ ಮಹೀಂದ್ರ ಕೃಷಿ ಯಂತ್ರೋಪಕರಣ ಕಂಪನಿ ಮೂಲಕ ಅಭಿವೃದ್ಧಿಪಡಿಸಲಾದ ಈ ನೂತನ ಟ್ರ್ಯಾಕ್ಟರ್ನ ಏಳು ಮಾದರಿಗಳು ಭಾರತದಲ್ಲಿ ಲಭ್ಯ. ಜತೆಗೆ ಈ ಟ್ರ್ಯಾಕ್ಟರ್ಗಳು ಆರು ಖಂಡಗಳಿಗೂ ಪೂರೈಕೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ಈ ಕುರಿತು ಮಾಹಿತಿ ನೀಡಿದ ಕಂಪನಿ ಕೃಷಿ ವಿಭಾಗದ ಸಿಇಒ ವಿಕ್ರಂ ವಾಘಾ, ‘ಶಕ್ತಿಯ ಮೂಲ ಎಂಬ ಸಂಸ್ಕೃತದ ‘ಓಜಾಸ್’ ಪದದಿಂದ ಪ್ರೇರಣೆ ಪಡೆದು ಈ ನೂತನ ಉತ್ಪನ್ನಕ್ಕೆ ಈ ಹೆಸರಿಡಲಾಗಿದೆ. ಇವುಗಳಲ್ಲಿ ಬುದ್ಧಿಮತ್ತೆ, ಉತ್ಪಾದನೆ ಹಾಗೂ ಆಟೊಮೇಷನ್ ವಿಭಾಗದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿರುವ ಮಹೀಂದ್ರ ಸಂಶೋಧನಾ ಕೇಂದ್ರ ಹಾಗೂ ಜಪಾನ್ನಲ್ಲಿರುವ ಮಿಟ್ಸುಬಿಷಿ ಮಹೀಂದ್ರ ಕೃಷಿ ಯಂತ್ರೋಪಕರಣ ಸಂಶೋಧನಾ ಕೇಂದ್ರದಲ್ಲಿನ ವಿಜ್ಞಾನಿಗಳು ಜಂಟಿಯಾಗಿ ಈ ನೂತನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ’ ಎಂದು ತಿಳಿಸಿದರು.

‘20 ರಿಂದ 40 ಅಶ್ವ ಶಕ್ತಿಯ ಸಾಮರ್ಥ್ಯದ ಈ ಟ್ರ್ಯಾಕ್ಟರ್ ನಾಲ್ಕೂ ಚಕ್ರಗಳಿಗೆ ಶಕ್ತಿ ನೀಡುವ ಸಾಮರ್ಥ್ಯ ಹೊಂದಿದೆ. ಅಧಿಕ ಶಕ್ತಿ, ಯಾವುದೇ ಬಗೆಯ ನೆಲದ ಮೇಲೂ ನಿಯಂತ್ರಣ ಸಾಧಿಸುವ ಟ್ರ್ಯಾಕ್ಷನ್, ಇಂಧನ ಕ್ಷಮತೆಯ ಜತೆಗೂ ಅಧಿಕ ಶಕ್ತಿ ಉತ್ಪಾದಿಸುವ ಅತ್ಯಾಧುನಿಕ ಎಂಜಿನ್, ಚಾಲಕನ ಹಿತಕ್ಕೆ ಅನುಗುಣವಾಗುವಂತೆ ಟಿಲ್ಟ್ ಸೌಲಭ್ಯವಿರುವ ಟೆಲಿಸ್ಕೋಪಿಕ್ ಸ್ಟಿಯರಿಂಗ್, ಕಡಿಮೆ ನಿರ್ವಹಣಾ ವೆಚ್ಚ ಇದು ಹೊಂದಿದೆ’ ಎಂದು ವಿವರಿಸಿದರು.

‘ಅಮೆರಿಕ, ಆಸೀನ್ ರಾಷ್ಟ್ರಗಳು, ಬ್ರೆಜಿಲ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಯುರೋಪ್ ಹಾಗೂ ಸಾರ್ಕ್ ದೇಶಗಳ ರೈತರ ಅಗತ್ಯಗಳನ್ನೂ ಇದು ಪೂರೈಸಲಿದೆ. 2024ರಲ್ಲಿ ಥಾಯ್ಲೆಂಡ್ ಅನ್ನೂ ಕಂಪನಿ ಪ್ರವೇಶಿಸಲಿದೆ. ಪುಣೆಯಲ್ಲಿ ಮಹೀಂದ್ರ ಓಜಾ ಟ್ರ್ಯಾಕ್ಟರ್ಗಳ ಬೆಲೆ ₹5.64ಲಕ್ಷದಿಂದ ₹7.35ಲಕ್ಷವರೆಗಿ ಕಂಪನಿ ನಿಗದಿಪಡಿಸಿದೆ’ ಎಂದು ವಿಕ್ರಂ ತಿಳಿಸಿದರು.

ಐದು ಬಾಗಿಲುಳ್ಳ ಹೊಸ ಮಾದರಿಯ ಥಾರ್ ಇವಿ ಮಾದರಿಯಲ್ಲಿ ಮಹೀಂದ್ರ ಅಭಿವೃದ್ಧಿಪಡಿಸಿದೆ. ಮರುಬಳಕೆಯ ಪ್ಲಾಸ್ಟಿಕ್ ಹಾಗೂ ಇತರ ಬಿಡಿ ಭಾಗಗಳನ್ನು ಬಳಕೆಯ ಜತೆಗೆ ಹಲವು ಹೊಸತುಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಜತೆಗೆ ಪಿಕಪ್ ವಾಹನದ ಕಾನ್ಸೆಪ್ಟ್ ಕಾರ್ ಅನ್ನೂ ಇದೇ ವೇದಿಕೆಯಲ್ಲಿ ಮಹೀಂದ್ರ ಪರಿಚಯಿಸಿತು

ಈ ಸಂದರ್ಭದಲ್ಲಿ ಮುಖ್ಯ ವಿನ್ಯಾಸಕ ಪ್ರತಾಪ್ ಬೋಸ್, ಫಾರ್ಮ್ ಟೆಕ್ನ ಅಧ್ಯಕ್ಷ ಹೇಮಂತ್ ಸಿಕ್ಕಾ, ಆಟೊ ಫಾರ್ಮ್ ಟೆಕ್ನ ಸಿಇಒ ರಾಜೇಶ್ ಜೇಜುರೀಕರ್ ಇದ್ದರು.

(ಮಹೀಂದ್ರ ಕಂಪನಿ ಆಹ್ವಾನದ ಮೇರೆಗೆ ಲೇಖಕರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.