ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು ತನ್ನ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ‘ಟಿಯಾಗೊ’ದ ಸೀಮಿತ ಆವೃತ್ತಿಯ ಟ್ರಿಮ್ ಅನ್ನು ಶನಿವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಷೋರೂಂ ಬೆಲೆ ₹ 5.79 ಲಕ್ಷ ಇದೆ.

ಹೊಸ ಆವೃತ್ತಿಯು ಬ್ಲಾಕ್ ಅಲಾಯ್ ವೀಲ್ಸ್, ರಿವರ್ಸ್ ಪಾರ್ಕಿಂಗ್ ಡಿಸ್ಪ್ಲೇ ವಿತ್ ಸೆನ್ಸರ್, ವಾಯ್ಸ್ ಕಮಾಂಡ್ ರೆಕಗ್ನಿಷನ್ ಸೇರಿದಂತೆ ಇನ್ನೂ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

‘2016ರಲ್ಲಿ ಬಿಡುಗಡೆ ಆದ ಬಳಿಕ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಉತ್ತಮ ಯಶಸ್ಸನ್ನು ಕಂಡಿದೆ. ಬಿಎಸ್–6 ಆವೃತ್ತಿಯನ್ನು 2020ರಲ್ಲಿ ಪರಿಚಯಿಸಲಾಯಿತು. ಅದಕ್ಕೆ ಜಿಎನ್ಸಿಎಪಿ 4 ಸ್ಟಾರ್ ಸುರಕ್ಷತೆ ನೀಡಿದೆ’ ಎಂದು ಟಾಟಾ ಮೋಟರ್ಸ್ನ ಪ್ರಯಾಣಿಕ ವಾಹನ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸಾ ತಿಳಿಸಿದ್ದಾರೆ.

‘3.5 ಲಕ್ಷಕ್ಕೂ ಅಧಿಕ ಗ್ರಾಹಕರು ಟಿಯಾಗೊ ಬಳಸುತ್ತಿದ್ದು, ಮಾರುಕಟ್ಟೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಸೀಮಿತ ಆವೃತ್ತಿಯು ಗ್ರಾಹಕರ ಉತ್ಸಾಹ ಹೆಚ್ಚಿಸುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ವೈಶಿಷ್ಟ್ಯ

* 14 ಇಂಚು ಬೋಲ್ಡ್ ಬ್ಲಾಕ್ ಅಲಾಯ್ ವೀಲ್ಸ್

* 5 ಇಂಚು ಟಚ್ಸ್ಕ್ರೀನ್ ಇನ್ಫೊಟೇನ್ಮೆಂಟ್

* 3ಡಿ ನ್ಯಾವಿಗೇಷನ್

* ರಿವರ್ಸ್ ಪಾರ್ಕಿಂಗ್ ಸೆನ್ಸರ್ ವಿತ್ ಡಿಸ್ಪ್ಲೇ

* ವಾಯ್ಸ್ ಕಮಾಂಡ್ ರೆಕಗ್ನಿಷನ್

* ಇಮೇಜ್ & ವಿಡಿಯೊ ಪ್ಲೇಬ್ಯಾಕ್

* ರೇರ್ ಪಾರ್ಸೆಲ್ ಶೆಲ್ಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.