ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ತನ್ನ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ‘ಪಂಚ್’ಅನ್ನು ಸೋಮವಾರ ಅನಾವರಣಗೊಳಿಸಿದೆ.

ಕಂಪನಿಯ ಜಾಲತಾಣ ಮತ್ತು ಮಾರಾಟ ಕೇಂದ್ರಗಳಲ್ಲಿ ₹ 21 ಸಾವಿರ ಪಾವತಿಸಿ ಈ ಕಾರು ಬುಕ್ ಮಾಡಬಹುದು. ಬುಕಿಂಗ್ ಸೋಮವಾರದಿಂದಲೇ ಆರಂಭ ಆಗಿದೆ. ಇದೇ ತಿಂಗಳ 20ರಂದು ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದು ಕಂಪನಿಯ ಉಪಾಧ್ಯಕ್ಷ ಆನಂದ್ ಕುಲಕರ್ಣಿ ಅವರು ತಿಳಿಸಿದ್ದಾರೆ.

1.2 ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುಯಲ್ ಮತ್ತು ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರ ಜೀವನಶೈಲಿಯ ಅಗತ್ಯಗಳನ್ನು ಪೂರೈಸಲು ನಾಲ್ಕು ವಿಧಗಳಲ್ಲಿ ಈ ಕಾರು ಲಭ್ಯವಿದೆ ಎಂದು ಅವರು ಹೇಳಿದರು.

ಆಲ್ಫಾ (ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಆರ್ಕಿಟೆಕ್ಚರ್‌ನಿಂದ ಸಿದ್ಧಪಡಿಸಿರುವ ಕಂಪನಿಯ ಮೊದಲ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಇದಾಗಿದೆ. ಮಾರುಕಟ್ಟೆಯ ಬೇಡಿಕೆಯನ್ನು ಆಧರಿಸಿ ಮುಂಬರುವ ಹಂತಗಳಲ್ಲಿ ಈ ಮಾದರಿಯನ್ನು ವಿದ್ಯುತ್ ಚಾಲಿತ ಆವೃತ್ತಿಯಾಗಿ ಪರಿವರ್ತಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 366 ಲೀಟರ್ ಬೂಟ್ ಸ್ಪೇಸ್, ಹರ್ಮಾನ್ ಇನ್ಫೊಟೇನ್ಮೆಂಟ್ ಸಿಸ್ಟಂ, ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.