ನವದೆಹಲಿ: 'ಭಾರತದ ಅತಿಡೊಡ್ಡ ಕಾರು ಕಳ್ಳ' ಎಂಬ ಕುಖ್ಯಾತಿ ಹೊಂದಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅನಿಲ್ ಚೌಹಾಣ್ ಎಂಬ 52 ವರ್ಷ ವಯಸ್ಸಿನ ವ್ಯಕ್ತಿ ಸುಮಾರು 27 ವರ್ಷಗಳಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಬರೋಬ್ಬರಿ 5,000ಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡಿದ್ದ ಎಂದು ದೆಹಲಿ ಪೊಲೀಸರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.

ಕಾರು ಕಳ್ಳತನ ಪ್ರಕರಣದಲ್ಲಿದೆಹಲಿ ಕೇಂದ್ರ ವಲಯದ ವಿಶೇಷ ಪೊಲೀಸ್ಘಟಕ ಅನಿಲ್ ಚೌಹಾಣ್ನನ್ನು ದೇಶ ಬಂಧು ಗುಪ್ತಾ ಮಾರ್ಗದಲ್ಲಿಬಂಧಿಸಿ ವಿಚಾರಣೆ ನಡೆಸುತ್ತಿದೆ.

3 ಹೆಂಡತಿಯರನ್ನು ಹಾಗೂ 7 ಮಕ್ಕಳನ್ನು ಹೊಂದಿರುವ ಬಂಧಿತ ಅನಿಲ್, ಮುಂಬೈ, ದೆಹಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿ, ವಿಲ್ಲಾ, ಬಂಗ್ಲೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

1995ರಲ್ಲಿ ದೆಹಲಿಯಲ್ಲಿ ಆಟೋ ಓಡಿಸಿಕೊಂಡಿದ್ದ ಅನಿಲ್, ಅಂದಿನಿಂದ ಇಂದಿನವರೆಗೂ ಮಾರುತಿ ಸುಜುಕಿ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುವುದರಲ್ಲಿ ನಿಷ್ಣಾತನಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕದ್ದ ಕಾರುಗಳನ್ನು ಅನಿಲ್, ನೇಪಾಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಿಗೆ ಮಾರುತ್ತಿದ್ದ. ಅಲ್ಲದೇ ಇತ್ತೀಚೆಗೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಮಾರಾಟದ ದಂಧೆ ಶುರು ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2015 ರಲ್ಲಿ ಅನಿಲ್ನನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಬಿಡುಗಡೆ ನಂತರವೂ ಕಾರು ಕಳ್ಳತನ, ಅಕ್ರಮ ವ್ಯವಹಾರಗಳನ್ನು ಮುಂದುವರೆಸಿದ್ದ. ಈತನ ವಿರುದ್ಧ ಜಾರಿ ನಿರ್ದೇಶನಾಲಯವೂ (ಇ.ಡಿ) ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಹಾಗೇ ಖತರನಾಕ್ ಕಳ್ಳನಾದ ಅನಿಲ್ ಚೌಹಾಣ್ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಬೆದರಿಕೆ, 3 ಕೊಲೆ, ಸುಲಿಗೆ ಸೇರಿದಂತೆ 180 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಐಫೋನ್ 14 ಸರಣಿಯ ಹೊಸ ಸ್ಮಾರ್ಟ್ಫೋನ್ಗಳನ್ನು ಅನಾವರಣಗೊಳಿಸಿದ ಆ್ಯಪಲ್: ಬೆಲೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.