ನವದೆಹಲಿ: ಓಲಾ ಎಲೆಕ್ಟ್ರಿಕ್ ಕಂಪನಿಯ ಇ–ಸ್ಕೂಟರ್ನ ಗುಣಮಟ್ಟ ಮತ್ತು ಮಾರಾಟ ಸೇವೆಯಲ್ಲಿನ ಲೋಪ ಕುರಿತು ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಆದೇಶಿಸಿದೆ.

15 ದಿನದೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ಮಾನದಂಡ ಮಂಡಳಿಯ (ಬಿಐಎಸ್) ಮಹಾನಿರ್ದೇಶಕರಿಗೆ (ತನಿಖೆ) ಸಿಸಿಪಿಎ ಮುಖ್ಯಸ್ಥೆ ನಿಧಿ ಖರೆ ನಿರ್ದೇಶನ ನೀಡಿದ್ದಾರೆ.

ಓಲಾ ಎಲೆಕ್ಟ್ರಿಕ್ನ ಸೇವೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಯಡಿ (ಎನ್ಸಿಎಚ್) 10 ಸಾವಿರಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಹಾಗಾಗಿ, ಓಲಾ ಎಲೆಕ್ಟ್ರಿಕ್ಗೆ ಪ್ರಾಧಿಕಾರವು ಷೋಕಾಸ್ ನೋಟಿಸ್ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.