ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚುತ್ತಿರುವ ಕಾರಣದಿಂದಾಗಿ ಆಗಸ್ಟ್‌ನಿಂದ ಎಲ್ಲ ಮಾದರಿ ವಾಹನಗಳ ಬೆಲೆ ಹೆಚ್ಚಿಸುವ ಆಲೋಚನೆ ನಡೆಸಿರುವುದಾಗಿ ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್ ಹೇಳಿದ್ದಾರೆ.

ಉಕ್ಕು, ಅಲ್ಯುಮಿನಿಯಂ ಮತ್ತು ಇತರ ಲೋಹಗಳ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೆಲವು ಲೋಹಗಳ ಬೆಲೆ ದಾಖಲೆ ಮಟ್ಟದಲ್ಲಿದ್ದು, ತಯಾರಿಕಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಂಪನಿಯು ಸಿಟಿ ಮತ್ತು ಅಮೇಜ್ ಕಾರುಗಳನ್ನೂ ಒಳಗೊಂಡಂತೆ ಹಲವು ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ.

‘ಹೆಚ್ಚುವರಿ ವೆಚ್ಚದಲ್ಲಿ ಎಷ್ಟನ್ನು ಕಂಪನಿಯೇ ಹೊರಲು ಸಾಧ್ಯವಿದೆ ಹಾಗೂ ಗ್ರಾಹಕರಿಗೆ ಎಷ್ಟು ವೆಚ್ಚವನ್ನು ದಾಟಿಸುವುದು ಅನಿವಾರ್ಯ ಆಗಬಹುದು ಎಂಬುದರ ಕುರಿತು ಚರ್ಚಿಸುತ್ತಿದ್ದೇವೆ. ಪರಿಷ್ಕೃತ ಬೆಲೆಗಳನ್ನು ಮುಂದಿನ ತಿಂಗಳಿನಿಂದ ಅನ್ವಯಿಸಲಾಗುವುದು’ ಎಂದು ಅವರು ಹೇಳಿದ್ದಾರೆ. ಕಂಪನಿಯು ಈ ಮೊದಲು ಏಪ್ರಿಲ್‌ನಲ್ಲಿ ಬೆಲೆ ಏರಿಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.