ಚೆನ್ನೈ: ತಮಿಳುನಾಡಿನ ಹೊಸೂರು ಹಾಗೂ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಪಕ್ಕದ ಪ್ರದೇಶಗಳು ವಿದ್ಯುತ್ ಚಾಲಿತ ಸ್ಕೂಟರ್‌ಗಳು (ಇ–ಸ್ಕೂಟರ್) ಮತ್ತು ಬ್ಯಾಟರಿಗಳನ್ನು ತಯಾರಿಸುವ ಕೇಂದ್ರವಾಗಿ ಹೊರಹೊಮ್ಮುತ್ತಿವೆ.

ಹೊಸೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಇ–ಸ್ಕೂಟರ್ ತಯಾರಿಕಾ ಘಟಕಗಳನ್ನು ಸ್ಥಾಪಿಸುವುದಾಗಿ ಓಲಾ ಸೇರಿದಂತೆ ಐದು ಕಂಪನಿಗಳು ತಮಿಳುನಾಡು ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿವೆ.

ಓಲಾ, ಏಥರ್, ಶ್ರೀವಾರು ಮೋಟರ್ಸ್ ಮತ್ತು ಸಿಂಪಲ್ ಎನರ್ಜಿ ಕಂಪನಿಗಳು ತಮ್ಮ ಹೊಸ ಘಟಕಗಳಲ್ಲಿ ಇ–ಸ್ಕೂಟರ್ ತಯಾರಿಸಲಿವೆ. ಟಿವಿಎಸ್ ಮೋಟರ್ ಕಂಪನಿಯು ಹೊಸೂರಿನಲ್ಲಿ ಇರುವ ತನ್ನ ತಯಾರಿಕಾ ಘಟಕದಲ್ಲಿಯೇ ಇ–ಸ್ಕೂಟರ್ ತಯಾರಿಸುತ್ತಿದೆ. ಆಂಪಿಯರ್ ಕಂಪನಿಯು ರಾಣಿಪೇಟೆಯಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ₹ 7 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ.

ರಾಜ್ಯ ಸರ್ಕಾರವು ಇ–ಸ್ಕೂಟರ್ ತಯಾರಕರಿಗಷ್ಟೇ ಅಲ್ಲದೆ, ಅವುಗಳಿಗೆ ಬ್ಯಾಟರಿಗಳನ್ನು ತಯಾರಿಸುವ ಕಂಪನಿಗಳನ್ನೂ ಆಕರ್ಷಿಸುತ್ತಿದೆ. ಈ ಸಂಬಂಧ ಎಕ್ಸೈಡ್, ಅಮರ್ ರಾಜಾದಂತಹ ಪ್ರಮುಖ ಕಂಪನಿಗಳ ಜೊತೆ ತಮಿಳುನಾಡು ಸರ್ಕಾರವು ಮಾತುಕತೆ ನಡೆಸುತ್ತಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬ್ಯಾಟರಿ ತಯಾರಿಕಾ ಘಟಕ ಸ್ಥಾಪಿಸುವ ಕುರಿತು ಲುಕಾಸ್–ಟಿವಿಎಸ್, ಲಿ ಎನರ್ಜಿ ಮತ್ತು ಸ್ಟಾನಡಿನ್ ಕಂಪನಿಗಳು ಈಗಾಗಲೇ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ಒಂದೇ ಪ್ರದೇಶದಲ್ಲಿ ಸ್ಕೂಟರ್ ಮತ್ತು ಅದರ ಬಿಡಿಭಾಗಗಳ ತಯಾರಕರ ಅಗತ್ಯ ಇದೆ. ಇ–ಸ್ಕೂಟರ್ ತಯಾರಿಸುವವರನ್ನು ಓಲೈಸುವ ಸಮಯದಲ್ಲಿಯೇ ಬ್ಯಾಟರಿ ತಯಾರಕರನ್ನೂ ಆಕರ್ಷಿಸುವತ್ತ ಗಮನ ಹರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಹೊಸೂರು ಅಭಿವೃದ್ಧಿ ಹೊಂದಿದ ನಗರವಾಗಿದ್ದು, ಇದು ಬೆಂಗಳೂರಿಗೆ ಹತ್ತಿರದಲ್ಲಿ ಇರುವುದರಿಂದ ಹೂಡಿಕೆದಾರರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಮತ್ತೊಂದು ಅನುಕೂಲವೆಂದರೆ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಲಭ್ಯವಿದೆ. ಹೀಗಾಗಿ ಹೆಚ್ಚಿನ ಹೊಸ ಘಟಕಗಳು ಇಲ್ಲಿಗೆ ಬರಲಿವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.