ಅಂತೂ ಮಹಿಂದ್ರಾ ಕಂಪೆನಿಯು ಜಾವಾ ಬೈಕನ್ನು ಬಿಡುಗಡೆಗೊಳಿಸಲು ಸಿದ್ಧವಾಗಿಯೇ ಬಿಟ್ಟಿದೆ. ಜಾವಾ ಎಂದರೆ ಈಗಲೂ ಯುವಕರ ಎದೆಬಡಿತ ಹೆಚ್ಚುತ್ತದೆ. ಜಾವಾ ಬಗ್ಗೆ ಯುವಕರಿಗಿರುವ ಈ ಪ್ರೀತಿಯನ್ನು ಮನಗಂಡು ಜಾವಾ ಪರಂಪರೆಗೆ ತಕ್ಕನಾದ ಅದ್ಭುತ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಮಹಿಂದ್ರಾ ಅಂಡ್ ಮಹಿಂದ್ರಾ ಜಾವಾ ಬೈಕನ್ನು ಕೊಂಡುಕೊಂಡ ಬಳಿಕ ಯಾವ ರೀತಿಯ ಬೈಕುಗಳನ್ನು ಹೊರಬಿಡಬಹುದು ಎಂಬ ಕುತೂಹಲ ಯುವಕರಲ್ಲಿ ಇತ್ತು. ನಾನಾ ಬಗೆಯ ವಿನ್ಯಾಸದ ಬೈಕುಗಳೆಲ್ಲ ಅಂತರ್ಜಾಲದಲ್ಲಿ ಹರಿದಾಡಿದ್ದವು. ಅವೆಲ್ಲವೂ ನಿಜವೇ. ಜಾವಾದ ಸುಮಾರು ನಾಲ್ಕು ಮಾದರಿಯ ವಿನ್ಯಾಸಗಳನ್ನು ಈಗ ಅಂತಿಮಗೊಳಿಸಲಾಗಿದೆ. ಆದರೆ, ನ. 15ರಂದು ಮೊದಲ ಬೈಕನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಈ ಜಾವಾ ಬೈಕ್ ಎಂದರೆ ಕಣ್ಣಲ್ಲಿ ಮೂಡುವ ಚಿತ್ರದ ಸಾಕಾರ ರೂಪದಂತಿದೆ. ಕೆಲವೇ ದಿನಗಳ ಹಿಂದೆ ಮಹಿಂದ್ರಾ, ಜಾವಾ ಬೈಕಿನ ಎಂಜಿನ್ನಿನ ಚಿತ್ರವನ್ನು ಮಾತ್ರ ಅಂತರ್ಜಾಲಕ್ಕೆ ಬಿಡುಗಡೆಗೊಳಿಸಿ ಸುದ್ದಿಯಾಗಿತ್ತು. 60ರ ದಶಕದಲ್ಲಿ ಕಂಡುಬರುತ್ತಿದ್ದ ಮೊಟ್ಟೆಯಾಕಾರದ ವಿಶೇಷ ವಿನ್ಯಾಸ ಹೊಂದಿದ್ದ ಪ್ರಸಿದ್ಧ ಎಂಜಿನ್ನಿನ ಮಾದರಿಯಲ್ಲೇ ಇರುವ ಈ ಎಂಜಿನ್ನಿಗೆ ಭಾರೀ ಮೆಚ್ಚುಗೆಯೂ ಲಭ್ಯವಾಗಿತ್ತು. ಬಹುತೇಕ ಹಳೆಯ ಎಂಜಿನ್ನಿನ ವಿನ್ಯಾಸ ಉಳಿಸಿಕೊಂಡು ಆಧುನಿಕತೆಯ ಸ್ಪರ್ಶವನ್ನು ಅದಕ್ಕೆ ನೀಡಲಾಗಿದೆ. ಎಂಜಿನ್ನಿಗೆ ಹೋಲುವಂತೆ, ಮೂಲ ಸ್ವರೂಪದ ಜಾವಾ ದೇಹವನ್ನೂ ಈಗ ನೀಡಿರುವುದು ಜಾವಾ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇದು ‘ಜಾವಾ ಕ್ಲಾಸಿಕ್’

ಹೊಸ ಬೈಕಿನ ಹೆಸರು ‘ಜಾವಾ ಕ್ಲಾಸಿಕ್’. ‘ಕ್ಲಾಸಿಕ್’ ಎನ್ನುವ ಹೆಸರಿಟ್ಟಿರುವುದೇ ಹಳೆಯ ನೆನಪುಗಳನ್ನು ಮತ್ತೆ ಮೂಡಿಸುತ್ತದೆ ಎಂಬ ಕಾರಣಕ್ಕೆ. ಈ ಹಿಂದೆ ಉತ್ಪಾದನೆಯಾಗುತ್ತಿದ್ದ ಜಾವಾ ಬೈಕುಗಳು 250 ಸಿಸಿ, 2 ಸ್ಟ್ರೋಕ್ಎಂಜಿನ್ಹೊಂದಿದ್ದವು. ಈಗ ಬಿಡುಗಡೆಗೊಳ್ಳಲಿರುವ ಜಾವಾ ಕ್ಲಾಸಿಕ್ಬೈಕ್ 300 ಸಿ.ಸಿ ಎಂಜಿನ್ಹೊಂದಿದೆ. ಬಹುತೇಕ ಜಾವಾ ಕ್ಲಾಸಿಕ್ವಿನ್ಯಾಸದ ಹೋಲಿಕೆಯಿದ್ದು ಈಗಾಗಲೇ ಬೈಕು ಪ್ರಿಯರ ಮನಗೆದ್ದಿದೆ.

ಬಲಿಷ್ಟ ಟೈರ್ಗಳು ಬೈಕಿನ ಅಂದವನ್ನು ಹೆಚ್ಚಿಸಿವೆ. ಗಟ್ಟಿಮುಟ್ಟಾದ ದೇಹ ಗಡಸುತನದ ಪ್ರತೀಕದಂತಿದೆ. ಹಾಗಾಗಿ, ರಾಯಲ್ ಎನ್ಫೀಲ್ಡ್ಬಿಟ್ಟರೆ ಸದ್ಯಕ್ಕೆ ಸದೃಢ ದೇಹವನ್ನು ಹೊಂದಿರುವ ಬೈಕ್ಜಾವಾ ಆಗಲಿದೆ ಎನ್ನುವುದು ವಿಶೇಷ.

ಎರಡು ಹೊಗೆ ಕೊಳವೆಗಳಿದ್ದ ಬೈಕುಗಳನ್ನು ಈ ಹಿಂದೆ ಜಾವಾ ಹಾಗೂ ಯಜ್ಡಿ ಬೈಕುಗಳು ಮಾತ್ರ ಉತ್ಪಾದಿಸುತ್ತಿದ್ದವು. ಇದೇ ಪರಂಪರೆ ಈ ಬೈಕಿನಲ್ಲೂ ಮುಂದುವರಿದಿದೆ.

ಹೊಸ ತಂತ್ರಜ್ಞಾನದ ಸಮ್ಮಿಲನ

ಕ್ಲಾಸಿಕ್ಎಂದಾಕ್ಷಣ ಇದು ಪುರಾತನ ಬೈಕೆಂದು ಅಂದುಕೊಳ್ಳಬೇಕಿಲ್ಲ. ಈ ಬೈಕಿನಲ್ಲಿ ಎಲ್ಲ ಹೊಸತನಗಳೂ ಸೇರಿವೆ. ಹೊಸ ತಂತ್ರಜ್ಞಾನ ಬೈಕಿನ ವಿಶೇಷ. ಫ್ಯೂಯೆಲ್ಇಂಜೆಕ್ಷನ್ತಂತ್ರಜ್ಞಾನದ ಆಯ್ಕೆ ಇರಲಿದೆ. ಹಾಗಾಗಿ, ಅತ್ಯುತ್ತಮ ಮೈಲೇಜ್, ಶಕ್ತಿ ಬೈಕಿಗೆ ಸಿಗಲಿದೆ. ಅದರ ಜತೆಗೆ, ಮುಂಭಾಗದ ಚಕ್ರಕ್ಕೆ ವೆಂಟಿಲೇಟೆಡ್ ಡಿಸ್ಕ್ಬ್ರೇಕ್ಇರಲಿದೆ. ಜತೆಗೆ, ಸೆಲ್ಫ್ಸ್ಟಾರ್ಟ್ಇರುವುದು ಮತ್ತಷ್ಟು ಅನುಕೂಲಕಾರಿ ಚಾಲನೆಯನ್ನು ಬೈಕ್ನೀಡುತ್ತದೆ.

ಆದರೆ, ಜಾವಾ ಪ್ರಿಯರ ಸಂಪೂರ್ಣ ಕುತೂಹಲ ಇಷ್ಟಕ್ಕೇ ತಣಿಯುವುದಿಲ್ಲ. ಇದರ ಬೆಲೆ, ವಿವಿಧ ಕೋನಗಳ ಫೋಟೊಗಳನ್ನು ಇನ್ನೂ ನೋಡುವುದು ಬಾಕಿ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಜಾವಾದ ಎಂಜಿನ್ನಿನ ಮೋಹಕ ಸದ್ದು. ಆ ಸದ್ದಿಗಾಗಿಯೇ ಜಾವಾ, ಯಜ್ಡಿ ಬೈಕುಗಳನ್ನು ಜನ ಕೊಳ್ಳುತ್ತಿದ್ದರು ಎಂಬ ಭವ್ಯ ಇತಿಹಾಸವಿದೆ. ಅದೇ ಸದ್ದಿನ ನಿರೀಕ್ಷೆಯಲ್ಲಿ, ಹೊಸ ಬೈಕಿನ ಕನಸು ಕಾಣುತ್ತಿರುವ ಬೈಕ್ ಪ್ರಿಯರಿಗೆ ರಸದೌತಣ ಸಿಗುವುದು ಮಾತ್ರ ಖಾತ್ರಿಯಾಗಿದೆ!

ಬಾಕ್ಸ್

ಆರ್ ಇ ಬೈಕ್ ಗೆ ಪ್ರತಿಸ್ಪರ್ಧಿಯೇ ?

ಜಾವಾ ಬೈಕ್ ರಾಯಲ್ಎನ್ಫೀಲ್ಡ್ಬೈಕ್ಗಳಿಗೆ ಪ್ರತಿಸ್ಪರ್ಧಿಯೇ ? ಹೀಗೊಂದು ಪ್ರಶ್ನೆ ಎದ್ದಿದೆ. ಬೈಕ್ ಪ್ರಿಯರ ನಡುವೆ ‘ಬಿಸಿ ಬಿಸಿ’ ಚರ್ಚೆಗಳೂ ಆರಂಭವಾಗಿವೆ. 'ಜಾವಾ ಬರ್ತಿರೋದರಿಂದ ಎನ್ ಫೀಲ್ಡ್ ಗೆ ನಡುಕ ಹುಟ್ಟಿದೆಯಂತೆ' ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

1996ರಲ್ಲಿ ಮೈಸೂರಿನಲ್ಲಿದ್ದ ಜಾವಾ – ಯಜ್ಡಿ ಬೈಕುಗಳ ಕಾರ್ಖಾನೆ ಮುಚ್ಚಿಹೋದ ಮೇಲೆ, ರಾಯಲ್ಎನ್ಫೀಲ್ಡ್ಗೆ ಪ್ರತಿಸ್ಪರ್ಧಿಯೇ ಇರಲಿಲ್ಲ. ಇದೀಗ ಮತ್ತೆ ಈ ಬೈಕುಗಳು ರಸ್ತೆಗೆ ಇಳಿಯಲಿರುವುದು ಪ್ರತಿಸ್ಪರ್ಧೆ ಸಿಕ್ಕಂತಾಗಿದೆ.

ಜಾವಾ– ಯಜ್ಡಿ ಬೈಕುಗಳು ರಾಯಲ್ಎನ್ಫೀಲ್ಡ್ಗೆ ಪ್ರತಿಸ್ಪರ್ಧಿಯಾಗಿದ್ದುದಕ್ಕೆ ಹಲವು ಕಾರಣಗಳಿವೆ. ಜಾವಾ ತಂತ್ರಜ್ಞಾನ ಗಡಸುತನಕ್ಕೆ ಹೆಸರುವಾಸಿ. ಎಂತಹ ರಸ್ತೆಯಲ್ಲಾದರೂ ಚಾಲನೆ ಮಾಡಬಲ್ಲ ಶಕ್ತಿ ಈ ಬೈಕ್ ಗೆ ಇದೆ. ಅದರಲ್ಲೂ ಯಜ್ಡಿ ರೋಡ್ಕಿಂಗ್ ಬೈಕನ್ನು ‘ಆಲ್ ಟೆರೈನ್ ವೆಹಿಕಲ್’ (ಎಲ್ಲ ಬಗೆಯ ರಸ್ತೆಗಳಲ್ಲಿ ಸಾಗಬಲ್ಲ ಸಾಮರ್ಥ್ಯ) ಎಂದೇ ಕರೆಯಲಾಗುತ್ತಿತ್ತು. ಈಗ ಈ ಬೈಕುಗಳು ಹೊರ ಬರುತ್ತಿರುವುದು ಸಹಜವಾಗಿಯೇ ಎನ್ಫೀಲ್ಡ್ಗೆ ಪೈಪೋಟಿಯ ಭಯ ಮೂಡುವಂತೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.