ಬೆಂಗಳೂರು: ಜೀಪ್ ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ಗುರುವಾರ ಹೊಸ ಎಸ್‌ಯುವಿ ‘ಜೀಪ್ ಮೆರಿಡಿಯನ್’ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆ ₹ 29.90 ಲಕ್ಷ (ಎಕ್ಸ್ ಷೋರೂಂ).

ಈ ಎಸ್‌ಯುವಿ ಅನ್ನು ವಿಶೇಷವಾಗಿ ಭಾರತದ ಮಾರುಕಟ್ಟೆಗೆ ವಿನ್ಯಾಸಗೊಳಿಸಲಾಗಿದೆ. 7 ಆಸನಗಳ ಈ ಎಸ್‌ಯುವಿ 2.0 ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 9 ಸ್ಪೀಡ್ ಆಟೊಮೆಟಿಕ್ ಮತ್ತು 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.

ಭಾರತದ ಗ್ರಾಹಕರಿಗೆ ಹೊಸ ಸಾಹಸವನ್ನು ಕೈಗೊಳ್ಳಲು ಅನುಕೂಲ ಆಗುವಂತೆ ಜೀಪ್ ಮೆರಿಡಿಯನ್ ಅನ್ನು ರೂಪಿಸಲಾಗಿದೆ ಎಂದು ಜೀಪ್ ಬ್ರ್ಯಾಂಡ್ ಇಂಡಿಯಾದ ಮುಖ್ಯಸ್ಥ ನಿಪುನ್ ಜೆ. ಮಹಾಜನ್ ಹೇಳಿದರು.

ಜೀಪ್ ಇಂಡಿಯಾದ ಜಾಲತಾಣದಲ್ಲಿ ಹಾಗೂ ವಿತರಣಾ ಕೇಂದ್ರಗಳಲ್ಲಿ ₹ 50 ಸಾವಿರ ಡೌನ್‌ಪೇಮೆಂಟ್ ನೀಡಿ ಬುಕಿಂಗ್ ಮಾಡಬಹುದು. ಜೂನ್‌ನಲ್ಲಿ ವಿತರಣೆ ಆರಂಭ ಆಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.