ನ್ಯೂಯಾರ್ಕ್: ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ (ಇ.ವಿ) ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಸ್ಥಳಗಳ ಅನ್ವೇಷಣೆಗಾಗಿ ಈ ತಿಂಗಳು ತಂಡವನ್ನು ಕಳುಹಿಸಲಿದೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಬುಧವಾರ ವರದಿ ಮಾಡಿದೆ.

ಟೆಸ್ಲಾ ಕಂಪನಿಯು ಇ.ವಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಅಂದಾಜು ₹ 16,700 ಕೋಟಿಯಿಂದ ₹ 25,000 ಕೋಟಿ ಹೂಡಿಕೆ ಮಾಡಲಿದೆ.

ಭಾರತವು ಕಳೆದ ತಿಂಗಳು ಕನಿಷ್ಠ ₹ 4,176 ಕೋಟಿ ಹೂಡಿಕೆ ಮಾಡಲು ಮತ್ತು ಮೂರು ವರ್ಷಗಳಲ್ಲಿ ದೇಶೀಯ ಉತ್ಪಾದನೆಯನ್ನು ಪ್ರಾರಂಭಿಸಲು ಬದ್ಧವಾಗಿರುವ ಕಾರು ತಯಾರಕ ಕಂಪನಿಗಳು ಉತ್ಪಾದಿಸುವ ಕೆಲವು ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡಿದೆ.

ಕಂಪನಿಯು ಅಮೆರಿಕದಿಂದ ತಂಡವನ್ನು ಅಧ್ಯಯನಕ್ಕಾಗಿ ಭಾರತಕ್ಕೆ ಕಳುಹಿಸಲಿದೆ. ತಂಡದವರು, ದೇಶದಲ್ಲಿ ವಾಹನ ಉತ್ಪಾದನಾ ಕೇಂದ್ರಗಳು ಹೆಚ್ಚಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.