ಸ್ಟಾಕ್ಹೋಮ್: 2030ರಿಂದ ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರವೇ ತಯಾರಿಸುವುದಾಗಿ ವೋಲ್ವೊ ಕಂಪನಿ ಹೇಳಿದೆ.

ಹೈಬ್ರಿಡ್ ಅನ್ನೂ ಒಳಗೊಂಡು ಆಂತರಿಕ ದಹನಕಾರಿ (ಇಂಟರ್ನಲ್ ಕಂಬಸ್ಚನ್) ಎಂಜಿನ್ಗಳನ್ನು ಹೊಂದಿರುವ ಎಲ್ಲಾ ಕಾರುಗಳ ತಯಾರಿಕೆಯನ್ನು ಹಂತಹಂತವಾಗಿ ನಿಲ್ಲಿಸುವುದಾಗಿ ತಿಳಿಸಿದೆ.

‘ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ಕಾರುಗಳಿಗೆ ದೀರ್ಘಾವಧಿಯ ಭವಿಷ್ಯವಿಲ್ಲ’ ಎಂದು ವೋಲ್ವೊ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಹೆನ್ರಿಕ್ ಗ್ರೀನ್ ತಿಳಿಸಿದ್ದಾರೆ.

‘ಕೇವಲ ಎಲೆಕ್ಟ್ರಿಕ್ ಕಾರ್ ತಯಾರಿಕಾ ಕಂಪನಿಯಾಗಲು ನಾವು ಬದ್ಧರಾಗಿದ್ದೇವೆ. ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ತಲುಪಲು ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪರಿಹಾರ ಕಂಡುಕೊಳ್ಳಲು ಇದು ಅವಕಾಶ ಕಲ್ಪಿಸಲಿದೆ’ ಎಂದೂ ಅವರು ಹೇಳಿದ್ದಾರೆ.

ಎಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಆನ್ಲೈನ್ನಲ್ಲಿ ಮಾತ್ರವೇ ಮಾರಾಟ ಮಾಡಲಾಗುವುದು ಎಂದು ಹೇಳಿದೆ. ಕಳೆದ ವರ್ಷ ಕಾಂಪ್ಯಾಕ್ಟ್ ಎಸ್ಯುವಿ ಎಕ್ಸ್ಸಿ 40 ರಿಚಾರ್ಜ್ ಬಿಡುಗಡೆ ಮಾಡಿದ್ದ ಕಂಪನಿಯು ಈ ವರ್ಷ ಸಂಪೂರ್ಣ ವಿದ್ಯುತ್ ಚಾಲಿತ ಎರಡನೇ ಕಾರನ್ನು ಅನಾವರಣ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.