ಬೇಸಿಗೆ ಎಂದರೆ ಬೇಸರ. ಬಿಸಿಲ ಧಗೆಗೆ ದೇಹ, ಮನಸ್ಸು ಎರಡೂ ಹೈರಾಣಾಗಿರುತ್ತದೆ. ಬೇಸಿಗೆಯ ದಾಹ ತಣಿಸುವ ಯೋಚನೆ ಮನದಲ್ಲಿ ಬಂದಾಗ ಮೊದಲು ನೆನಪಾಗುವುದು ಎಳನೀರು. ಎಳನೀರು ಕುಡಿಯುವುದರಿಂದ ದೇಹ ತಂಪಾಗುವುದಲ್ಲದೇ ಇದರಲ್ಲಿ ಹಲವು ಬಗೆಯ ಆರೋಗ್ಯವರ್ಧಕ ಅಂಶಗಳಿವೆ. ಅಲ್ಲದೇ ಸೌಂದರ್ಯ ಹೆಚ್ಚಿಸುವ ಗುಣಗಳೂ ಇದರಲ್ಲಿದೆ. ಎಳನೀರನ್ನು ನೈಸರ್ಗಿಕ ಸೌಂದರ್ಯವರ್ಧಕ ಅಂತಲೂ ಕರೆಯಬಹುದು. ಹಾಗಾದರೆ ಸೌಂದರ್ಯವರ್ಧಕವಾಗಿ ಇದರ ಬಳಕೆ ಹೇಗೆ? ಯಾವೆಲ್ಲಾ ಚರ್ಮದ ಸಮಸ್ಯೆಗಳಿಗೆ ಇದರ ಬಳಕೆಯಿಂದ ಪರಿಹಾರ ಕಂಡುಕೊಳ್ಳಬಹುದು... ಈ ಕುರಿತ ಟಿಪ್ಸ್ ಇಲ್ಲಿದೆ.

ಎಳನೀರಿನ ಟೋನರ್

ಎಳನೀರಿನ ಟೋನರ್ ಚರ್ಮವನ್ನು ಮೃದುವಾಗಿಸುತ್ತದೆ. ಎಳನೀರು ಟೋನರ್ ಬಳಸುವ ಮೊದಲು ಮುಖವನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. ಹತ್ತಿ ಉಂಡೆಯನ್ನು ಎಳನೀರಿನಲ್ಲಿ ಅದ್ದಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. ಚರ್ಮದ ಎಲ್ಲಾ ಭಾಗಕ್ಕೂ ಎಳನೀರು ತಾಕುವಂತೆ ಹಚ್ಚಿಕೊಳ್ಳಿ. ಪ್ರತಿದಿನ ಈ ರೀತಿ ಮಾಡುವುದರಿಂದ ಮುಖದ ಚರ್ಮದಲ್ಲಿ ತೇವಾಂಶ ಹೆಚ್ಚುತ್ತದೆ. ಇದರಿಂದ ಮುಖ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.

ಎಳನೀರು ಮಾಸ್ಕ್

ಎರಡು ಚಮಚ ಎಳನೀರು, ಅರ್ಧ ಚಮಚ ಅರಿಸಿನ ಪುಡಿ ಹಾಗೂ ಅರ್ಧ ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆ, ಮೊಡವೆಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗುವುದಲ್ಲದೇ ತ್ವಚೆಯೂ ಮೃದುವಾಗುತ್ತದೆ.

ಮುಲ್ತಾನಿಮಿಟ್ಟಿ ಎಳನೀರು ಫೇಸ್ಪ್ಯಾಕ್

ಮುಲ್ತಾನಿಮಿಟ್ಟಿಗೆ ಎಳನೀರು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಟ್ಯಾನ್ ಅನ್ನು ನಿವಾರಿಸಬಹುದು. ವಾರಕ್ಕೆ ಎರಡು ಬಾರಿ ಈ ಫೇಸ್ಪ್ಯಾಕ್ ಬಳಕೆಯಿಂದ ಮುಖದ ಟ್ಯಾನ್ ನಿವಾರಣೆಯಾಗಿ ಮುಖದ ಅಂದ ಹೆಚ್ಚುವುದರಲ್ಲಿ ಎರಡು ಮಾತಿಲ್ಲ.

ಆರೋಗ್ಯಕರ ಹಾಗೂ ಕಾಂತಿಯುತ ಚರ್ಮ

ಎಳನೀರಿನಲ್ಲಿ ವಿಟಮಿನ್ ಸಿ, ಕೆ ಹಾಗೂ ಎ ಅಂಶ ಅಧಿಕವಿದೆ. ಆ ಕಾರಣಕ್ಕೆ ಇದನ್ನು ಹಚ್ಚುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು ಇದು ಚರ್ಮವನ್ನು ಸ್ವಚ್ಛಗೊಳಿಸಿ ಕಾಂತಿ ಹೆಚ್ಚಲು ಸಹಾಯ ಮಾಡುತ್ತದೆ. ಅಲ್ಲದೇ ಇದನ್ನು ಬೇರೆ ಬೇರೆ ಫೇಶಿಯಲ್ ಪ್ಯಾಕ್ಗಳೊಂದಿಗೆ ಬಳಸುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಟ್ಯಾನ್ನಂತಹ ಸಮಸ್ಯೆ ನಿವಾರಣೆಯಾಗುತ್ತದೆ.

ಆ್ಯಂಟಿ ಏಜಿಂಗ್

ವಯಸ್ಸಾದಂತೆ ಚರ್ಮದಲ್ಲಿ ಹಲವು ರೀತಿಯ ವ್ಯತ್ಯಾಸಗಳಾಗುತ್ತವೆ. ಆದರೆ ಎಳನೀರನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಮೇಲೆ ಮೂಡುವ ಗೆರೆಗಳು, ನೆರಿಗೆಯಂತಹ ವಯಸ್ಸಾದ ಲಕ್ಷಣಗಳನ್ನು ಇದು ನಿವಾರಿಸುತ್ತದೆ. ಇದರಲ್ಲಿ ನೈಸರ್ಗಿಕ ವಿಟಮಿನ್ ಹಾಗೂ ಮಿನರಲ್ಸ್ ಅಂಶಗಳಿದೆ ಇವು ಚರ್ಮದ ಹೊಳಪು ಹೆಚ್ಚಲು ಸಹಕರಿಸುತ್ತವೆ.

ಮೊಡವೆ, ಕಪ್ಪುಕಲೆಗಳ ನಿವಾರಣೆ

ಎಳನೀರಿನಲ್ಲಿ ಡಿಟಾಕ್ಸಿಫೈಯಿಂಗ್, ಆ್ಯಂಟಿ ಇನ್ಫ್ಲಾಮೆಟರಿ ಅಂಶಗಳೂ ಹೆಚ್ಚಿವೆ. ಇದರಲ್ಲಿ ಲ್ಯೂರಿಕ್ ಆ್ಯಸಿಡ್ ಅಂಶವಿದ್ದು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆ ಕಾರಣಕ್ಕೆ ಪ್ರತಿನಿತ್ಯ ಎಳನೀರಿನಿಂದ ಮುಖ ತೊಳೆಯುವುದರಿಂದ ಕಪ್ಪು ಕಲೆ, ಬಂಗು, ಮೊಡವೆಯಂತಹ ಸಮಸ್ಯೆಗಳಿವೆ ಪರಿಹಾರ ಸಿಗುತ್ತದೆ. ಒಣ ಚರ್ಮದವರು ಎಳನೀರನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿ ತೇವಾಂಶ ಹೆಚ್ಚಿ ತ್ವಚೆಯ ಅಂದ ಹೆಚ್ಚುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.