ಚಂದದ ತಂಪು ಕನ್ನಡಕವನ್ನು ಆಯ್ಕೆ ಮಾಡಿಕೊಳ್ಳುವುದು ಅತಿ ಸುಲಭ. ಆದರೆ ಸೂಕ್ತವಾದ ಕನ್ನಡಕ ಆಯ್ಕೆ ಮಾಡಿಕೊಳ್ಳಲು ತುಸು ಸಂಯಮ ಬೇಕು.

ನೀವು ತಂಪು ಕನ್ನಡಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ, ಮೊದಲು ನಿಮ್ಮ ಮುಖದ ಆಕಾರ ಹೇಗಿದೆ ಎಂದು ಪತ್ತೆ ಮಾಡಿ. ನೀವು ದುಂಡು ಮುಖದವರಾ? ಚೌಕಾಕಾರದ ಮುಖವಿದೆಯೇ, ಕೋಲುಮೊಗದವರಾ ಅಥವಾ ಬಾದಾಮಿ ಆಕಾರವಿದೆಯೇ ಎಂದು ಪತ್ತೆ ಮಾಡಿ.

ಅರೆರೆ.. ಮುಖದ ಆಕಾರ ಪತ್ತೆ ಮಾಡುವುದು ಹೇಗೆಂದು ಹೇಳಬೇಕಲ್ಲವೇ? ಕೈಗನ್ನಡಿ ಹಿಡಿದುಕೊಂಡು, ನಿಮ್ಮ ಮುಖದ ಪ್ರತಿಬಿಂಬ ನೋಡಿ. ಕಣ್ಣಳತೆಯಲ್ಲಿ ಅಥವಾ ಅಂದಾಜಿನಲ್ಲಿ ಮುಖದ ಹೊರ ಆವರಣದ ಸುತ್ತ ಗೆರೆ ಎಳೆಯಿರಿ. ಇದು ಕಷ್ಟವೆನಿಸಿದರೆ ಒಂದು ಬಣ್ಣದ ಪೆನ್ಸಿಲ್‌ನಿಂದ ಮುಖ ಬಿಂಬದ ಸುತ್ತ ಒಂದು ಗೆರೆ ಎಳೆಯಿರಿ. ಇದರಿಂದ ನಿಮ್ಮ ಮುಖದ ಆಕಾರ ಗೊತ್ತಾಗುವುದು.

ಈಗ ಆಯ್ಕೆಯ ಎರಡನೆಯ ಹಂತ. ನಿಮ್ಮ ಮುಖದ ಆಕಾರದ ವಿರುದ್ಧವಾಗಿರುವ ಆಕಾರದ ಫ್ರೇಮುಗಳನ್ನು ಆಯ್ಕೆ ಮಾಡಿಕೊಳ್ಳಿ. ದುಂಡನೆಯ ಮುಖವಿದ್ದರೆ, ಸಹಜವಾಗಿಯೇ ಚೌಕಾಕಾರದ ಫ್ರೇಮನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಕೆನ್ನೆಯ ಭಾಗ ಉಬ್ಬಿದಂತಿದ್ದರೆ ಫ್ರೇಮಿನ ಮೂಲೆಗಳು ಹೊರಭಾಗಕ್ಕೆ ಚಾಚಿದಂತಿರಲಿ. ಚೌಕಾಕಾರದ ಮುಖವಿದ್ದರೆ ದುಂಡನೆಯ ಅಥವಾ ಮೊಟ್ಟೆಯಾಕಾರವನ್ನು ಹೋಲುವ ಫ್ರೇಮನ್ನು ಆಯ್ಕೆ ಮಾಡಿಕೊಳ್ಳಿ.

ರಾತ್ರಿ ಹೊತ್ತಿನಲ್ಲಿ, ಒಳಾಂಗಣದಲ್ಲಿ ತಂಪು ಕನ್ನಡಕಗಳನ್ನು ಧರಿಸುವುದು ಬೇಡ. ಕಣ್ಣುಗಳ ರಕ್ಷಣೆಗಾಗಿ ತಂಪುಕನ್ನಡಕಗಳಿರುತ್ತವೆ. ಕತ್ತಲೆಯಲ್ಲಿ ಹಾಕಿಕೊಂಡು ದೃಷ್ಟಿಗೆ ಅತಿ ಹೆಚ್ಚು ಒತ್ತಡಹಾಕುವುದು ತರವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.