ಅಂದದ ಅಧರವಿದ್ದರೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ವದನದ ಅಂದ ಹೆಚ್ಚಿಸುವಲ್ಲಿ ತುಟಿಯ ರಂಗು ಪ್ರಮುಖ ಪಾತ್ರ ವಹಿಸುವುದರಿಂದ ಮೇಕಪ್ ಮಾಡದೇ ತುಟಿಯ ರಂಗಿನಿಂದಲೇ ಚಂದ ಕಾಣುವ ಟ್ರೆಂಡ್ ಸದ್ಯಕ್ಕಿದೆ.

ಕಾಲೇಜು ಯುವತಿಯರಿಂದ ಹಿಡಿದು ಬಹುತೇಕ ಮಹಿಳೆಯರು ತುಟಿಯ ಕಾಳಜಿ ಮಾಡುವುದು ಸಹಜ. ಬಗೆ ಬಗೆಯ ತುಟಿಯರಂಗಿನಲ್ಲಿ ತಮಗೆ ಮೆಚ್ಚುವ ರಂಗನ್ನು ಆಯ್ಕೆ ಮಾಡಿಕೊಳ್ಳುವುದೂ ಒಂದು ಕೌಶಲ. ಅದರಲ್ಲೂ ಲಿಪ್‌ಗ್ಲಾಸ್ ಆಯ್ಕೆ ಮಾಡಿಕೊಳ್ಳುವಾಗ ಜಾಗ್ರತೆ ವಹಿಸಿದಷ್ಟು ಉತ್ತಮ. ಅದರ ಕೆಲ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಲಿಪ್‌ಗ್ಲಾಸ್ ವಿಧ

*ಹೊಳೆಯುವ ಮತ್ತು ನೈಸರ್ಗಿಕ ಲಿಪ್‌ಗ್ಲಾಸ್ (Shine and Natura* *ipg*oss) : ಇದು ತುಟಿಗೆ ನೈಸರ್ಗಿಕ ಲುಕ್‌ನೊಂದಿಗೆ ಹೊಳಪನ್ನು ನೀಡುತ್ತದೆ. ಇದನ್ನು ಯಾವುದೇ ವರ್ಣದ ಲಿಪ್‌ಸ್ಟಿಕ್ ಮೇಲೆ ಅಪ್ಲೈ ಮಾಡಬಹುದು.
*ವರ್ಣಯುಕ್ತ (ಕಲರಿಂಗ್) ಲಿಪ್‌ಗ್ಲಾಸ್: ಬಣ್ಣ ಹಾಗೂ ಹೊಳಪು ಎರಡನ್ನೂ ನೀಡುತ್ತದೆ.
– ಗ್ಲಿಟ್ಟರ್ ಲಿಪ್‌ಗ್ಲಾಸ್: ಗ್ಲಿಟರಿ (ಮಿನುಗುವ) ಹೊಳಪನ್ನು ನೀಡುತ್ತದೆ. ಟೀನೇಜ್ ಯುವತಿಯರು ಹೆಚ್ಚು ಬಳಸುತ್ತಾರೆ.
*ಸುವಾಸನೆಯುಕ್ತ ಲಿಪ್‌ಗ್ಲಾಸ್: ಸ್ಟ್ರಾಬೆರಿ, ವೆನಿಲಾ, ರೋಸ್, ಆರೆಂಜ್ ಹೀಗೆ ಹಲವು ಸುವಾಸನೆಯಲ್ಲಿಯೂ ಲಿಪ್‌ಗ್ಲಾಸ್ ಲಭ್ಯವಿದೆ.

ಲಿಪ್‌ಗ್ಲಾಸ್ ಬಳಕೆಗೆ ಸಲಹೆಗಳು

* ಲಿಪ್‌ಗ್ಲಾಸ್ ಬಳಸುವುದಕ್ಕೂ ಮುನ್ನ ತುಟಿ ಒಣಗಿದ್ದರೆ, ಸಿಪ್ಪೆ ಎದ್ದಿದ್ದರೆ ಹತ್ತಿಬಟ್ಟೆ ಅಥವಾ ಮೃದುವಾದ ಬ್ರಷ್ ಅನ್ನು ಒದ್ದೆ ಮಾಡಿಕೊಂಡು ಮೃದುವಾಗಿ ತುಟಿಯನ್ನು ಉಜ್ಜಿ ಡೆಡ್ ಸ್ಕಿನ್ ತೆಗೆದುಕೊಳ್ಳಿ.

* ನಂತರ ಲಿಪ್ ಬಾಮ್ ಹಚ್ಚಿಕೊಳ್ಳಿ.

* ಲಿಪ್‌ಗ್ಲಾಸ್ ಹಚ್ಚಿದ ನಂತರ ಎರಡು ತುಟಿಗಳನ್ನು ರಬ್ ಮಾಡಬೇಡಿ. ಇದರಿಂದ ಲಿಪ್‌ಗ್ಲಾಸ್ ತುಟಿಯಿಂದ ಹೊರಹೋಗುವ ಸಾಧ್ಯತೆ ಇರುತ್ತದೆ.

* ಲಿಪ್‌ಸ್ಟಿಕ್ ಮೇಲೆ ಲಿಪ್‌ಗ್ಲಾಸ್ ಬಳಸುವುದಾದರೆ, ಮ್ಯಾಟ್ ಲಿಪ್‌ಸ್ಟಿಕ್ ಅನ್ನೇ ಬಳಸಿ.

* ಸಾಧ್ಯವಾದಷ್ಟು ಯಾವಾಗಲೂ ನಿಮಗೆ ಹೊಂದುವ ಬ್ರಾಂಡೆಡ್ ಲಿಪ್‌ಗ್ಲಾಸ್ ಅನ್ನೇ ಆಯ್ದುಕೊಳ್ಳಿ ಬ್ರಾಂಡೆಡ್ ಕೊಳ್ಳುವುದರಿಂದ ದೀರ್ಘಾವಧಿವರೆಗೆ ಅಧರವನ್ನು ಅಲಂಕರಿಸುತ್ತದೆ.

* ದೇಹದ ವರ್ಣಕ್ಕೆ ಹೊಂದುವ ಬಣ್ಣದ ಲಿಪ್‌ಗ್ಲಾಸ್ ಅನ್ನೇ ಆಯ್ಕೆ ಮಾಡಿ.

* ಸಂದರ್ಭ ಹಾಗೂ ಉಡುಗೆಗೆ ಯಾವ ವರ್ಣ ಬಳಸಬೇಕು ಎಂಬ ಸೂಕ್ಷ್ಮತೆ ಇರಲಿ.

ಲಿಪ್‌ಗ್ಲಾಸ್ ದೀರ್ಘಾವಧಿ ಇರುವಂತೆ ಮಾಡುವುದು ಹೇಗೆ?

ಸಾಮಾನ್ಯವಾಗಿ ಲಿಪ್‌ಗ್ಲಾಸ್ ಬೇಗನೆ ಅಳಿಸಿಹೋಗುವುದರ ಜತೆಗೆ ತುಟಿಯ ಸುತ್ತೆಲ್ಲ ಹರಡುವುದು ಸಾಮಾನ್ಯ. ಇದನ್ನು ತಪ್ಪಿಸಲು ಇಲ್ಲಿ ಕೆಲ ಸಲಹೆ ಇದೆ.

ಲಿಪ್‌ಗ್ಲಾಸ್ ಬಳಸುವುದಕ್ಕೂ ಮುನ್ನ ಲಿಪ್‌ಲೈನರ್ ಅಪ್ಲೈ ಮಾಡಿ. ನಂತರ ಅದರ ಮೇಲೆ ಪೌಡರ್ ಹಚ್ಚಬೇಕು. ನಂತರ ಲಿಪ್‌ಗ್ಲಾಸ್ ಬಳಸಿದರೆ ದೀರ್ಘಾವಧಿವರೆಗೆ ಇರುವ ಜತೆಗೆ ತುಟಿಯ ಸುತ್ತ ಹರಡುವುದನ್ನು ತಪ್ಪಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.