ಬೆಂಗಳೂರು: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸಲ್ ಪೆಟೀಟ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯಲ್ಲಿ ವಾಸವಿರುವ ಶಿರಸಿ ಮೂಲದ ಶ್ರುತಿ ಹೆಗಡೆ ಗೆಲುವು ಸಾಧಿಸಿದ್ದಾರೆ.

ಇವರು ಶಿರಸಿಯ ಮುಂಡಿಗೇಸರ ಮೂಲದವರು. ಚರ್ಮರೋಗ ತಜ್ಞೆಯಾಗಿರುವ ಶ್ರುತಿ, 2018ರಲ್ಲಿ ಮಿಸ್ ಸೌತ್ ಇಂಡಿಯಾದ ಹಾಗೂ 2023ರಲ್ಲಿ ನಡೆದ ಜಾಗತಿಕ ಮಿಸ್ ಏಷ್ಯಾ ಇಂಟರ್ನ್ಯಾಷನಲ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿದ್ದರು.

ಮಿಸ್ ಯೂನಿವರ್ಸಲ್ ಪೆಟೀಟ್ ಸೌಂದರ್ಯ ಸ್ಪರ್ಧೆಯನ್ನು 5.6 ಅಡಿ ಎತ್ತರಕ್ಕಿಂತ ಕಡಿಮೆ ಇರುವವರಿಗೆ ನಡೆಸಲಾಗುತ್ತದೆ. ಕಳೆದ ಜೂನ್ 6 ರಿಂದ 10ರವರೆಗೆ ಈ ಸ್ಪರ್ಧೆ ನಡೆದಿತ್ತು.

ಗೆಲುವಿನ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಶ್ರುತಿ ಖುಷಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.