ಇತ್ತೀಚಿನ ದಿನಗಳಲ್ಲಿನ ಜೀವನ ಕ್ರಮ, ಆಹಾರ ಕ್ರಮ ಮತ್ತು ಒತ್ತಡದ ಜೀವನದಿಂದ ಬಹುಬೇಗನೆ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳಬಹುದು. ಸ್ವಲ್ಪ ಆರೈಕೆ ಕೈಗೊಂಡರೆ, ಚರ್ಮದ ಸುಕ್ಕನ್ನು ನಿವಾರಿಸಿಕೊಳ್ಳಬಹುದು. ವಯೋಸಹಜವಾಗಿ ಮೂಡುವ ಈ ಸುಕ್ಕನ್ನು ಮರೆಮಾಚಲು ಸಾಕಷ್ಟು ತಂತ್ರಜ್ಞಾನಗಳೇನೋ ಇವೆ. ಆದರೆ ಅದರಿಂದ ಅಡ್ಡಪರಿಣಾಮಗಳ ಸಾಧ್ಯತೆಯೂ ಹೆಚ್ಚಿರುವ ಕಾರಣ, ನಾವು ಮನೆಮದ್ದಿನ ಕಡೆ ಗಮನ ಹರಿಸೋಣ. ಅದಕ್ಕೆ ಮುನ್ನ ಚರ್ಮ ಸುಕ್ಕಾಗಲು ಏನೇನು ಕಾರಣಗಳಿವೆ, ಎನ್ನುವುದನ್ನು ಅರಿಯೋಣ.

ಸುಕ್ಕಿಗೆ ಕಾರಣಗಳು
* ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಹಾಗೂ ಜೀವನಕ್ರಮ
* ನಿದ್ದೆಯ ಕೊರತೆ
* ಅತಿಯಾದ ಸೌಂದರ್ಯವರ್ಧಕಗಳ ಬಳಕೆ
* ಮಾಲಿನ್ಯ
* ಬಿಸಿಲಿನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದು
* ನೀರು ಅಥವಾ ಹಣ್ಣಿನ ಪಾನೀಯ ಸೇವನೆ ಕಡಿಮೆ ಇರುವುದು.
* ಚರ್ಮದ ಆರೈಕೆ ಮಾಡಿಕೊಳ್ಳದಿರುವುದು
* ಅತಿಯಾದ ಧೂಮಪಾನ
* ಮಲಗುವ ಕ್ರಮದ ಜ್ಞಾನದ ಕೊರತೆ
* ಮುಖದ ಮಸಾಜ್ ಮಾಡುವಾಗ ಸರಿಯಾದ ಕ್ರಮ ಪಾಲಿಸದೇ ಇರುವುದು. ಇನ್ನೂ ಹಲವು.

ಸುಕ್ಕು ದೂರ ಮಾಡುವ ಕ್ರಮ
* ತೀವ್ರವಾದ ಬಿಸಿಲಿನಿಂದ ಚರ್ಮ ರಕ್ಷಣೆ ಮಾಡಿಕೊಳ್ಳಿ. ಸನ್‌ಸ್ಕ್ರೀನ್ ಕ್ರೀಮ್, ಲೋಷನ್‌ಗಳನ್ನು ಬಳಕೆ ಮಾಡುವುದರಿಂದಲೂ ಸುಕ್ಕನ್ನು ದೂರ ಇಡಬಹುದು.
* ದೇಹದ ಎಲ್ಲಾ ಭಾಗಕ್ಕೂ ನೀರಿನ ಅತ್ಯವಶ್ಯಕತೆ ಇದೆ. ಅಲ್ಲದೇ ದೇಹದಲ್ಲಿನ ಟಾಕ್ಸಿನ್ ಅನ್ನು ಹೊರ ಹಾಕಿ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಕ್ರಮವಾದ ನೀರಿನ ಸೇವನೆ ಅವಶ್ಯ. ದೇಹಕ್ಕೆ ನೀರು ಕಡಿಮೆ ಆದಾಗ ಚರ್ಮ ಬಿರಿಯಲು ಆರಂಭಿಸಿ ಬೇಗ ಸುಕ್ಕು ಆವರಿಸುತ್ತದೆ.
* ಇತ್ತೀಚಿನ ದಿನಗಳಲ್ಲಿ ಕೆಲವರು ಸಪೂರ ದೇಹ (ಜೀರೊ ಫಿಗರ್) ಹೊಂದುವುದಕ್ಕಾಗಿ ಸರಿಯಾಗಿ ಆಹಾರ ಸೇವಿಸದಿರುವುದನ್ನೇ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಇದು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತಿದೆ ಎಂಬ ಅಂಶವನ್ನು ಮರೆಯುತ್ತಿದ್ದೇವೆ. ವಿಟಮಿನ್‌ಯುಕ್ತ ಆಹಾರ ಸೇವನೆಯಿಂದ ಸುಕ್ಕನ್ನು ದೂರಮಾಡುವುದರ ಜೊತೆಗೆ ಆರೋಗ್ಯ ಸಂರಕ್ಷಣೆಗೂ ದಾರಿಯಾಗಿದೆ.
* ತರಕಾರಿಗಳಲ್ಲಿ ಕ್ಯಾರೆಟ್, ಕುಂಬಳಕಾಯಿ, ಬ್ರೊಕೊಲಿ, ಸೊಪ್ಪು, ದೊಣಮೆಣಸು/ ದಪ್ಪಮೆಣಸು (ಬೆಲ್ ಪೆಪ್ಪರ್ಸ್)ಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರ ಜತೆಗೆ ಗ್ರೀನ್ ಟೀ, ಆಲೀವ್ ಎಣ್ಣೆ, ದಾಳಿಂಬೆ, ಚೆರ‍್ರಿ, ಪೇರಲೆ/ ಸೀಬೆ, ಲಿಂಬು ಜಾತಿಯ ಹಣ್ಣು, ಮೀನು, ಮೊಟ್ಟೆಯ ಬಿಳಿಭಾಗ, ಅವಕಾಡೊ/ ಬಟರ್‌ಫ್ರೂಟ್, ವಾಲ್‌ನಟ್ಸ್, ಅಗಸೆ ಬೀಜಗಳು ಉಪಯುಕ್ತ.
* ಕ್ರಮಬದ್ಧವಾದ ಯೋಗ, ಧ್ಯಾನ, ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಮಾಡುವುದರಿಂದಲೂ ಚರ್ಮದ ಸುಕ್ಕನ್ನು ದೂರ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.