ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ (ಯುಕೆಪಿ) ಬಜೆಟ್ನಲ್ಲಿ ಅನುದಾನ ನಿಗದಿ ಮಾಡದ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಯವರಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಬಜೆಟ್ ಮಂಡನೆ ಆದ ಬಳಿಕ ಮುಖ್ಯಮಂತ್ರಿಯವರ ಕೊಠಡಿಗೆ ತೆರಳಿದ ಅವರು, ಬಜೆಟ್ನಲ್ಲಿ ಹಣ ನಿಗದಿ ಮಾಡದ ಬಗ್ಗೆ ನಿರಾಸೆ ಆಗಿರುವುದನ್ನು ಅವರ ಗಮನಕ್ಕೆ ತಂದರೆಂದು ಮೂಲಗಳು ತಿಳಿಸಿವೆ.

ಕಾರಜೋಳ ಅವರನ್ನು ಸಮಾಧಾನಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಗೆಜಲಸಂಪನ್ಮೂಲ ಇಲಾಖೆಯು ಕ್ರಿಯಾ ಯೋಜನೆ ರೂಪಿಸುವಾಗ ₹10,000 ಕೋಟಿಯನ್ನು ಇದೇ ಸಾಲಿನಲ್ಲಿ ನಿಗದಿ ಮಾಡುವುದಾಗಿಯೂ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

ಬಜೆಟ್ಗೂ ಮೊದಲೇ ಕಾರಜೋಳ ಅವರು ನಿಯೋಗವನ್ನು ಒಯ್ದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಈ ಯೋಜನೆ ಪೂರ್ಣಗೊಳಿಸಲು ₹56,000 ಕೋಟಿ ಅಗತ್ಯವಿದೆ. ಪ್ರತಿ ವರ್ಷ ₹15,000 ಕೋಟಿಯಷ್ಟು ಅನುದಾನ ನೀಡಿದರೆ, ಮೂರು ವರ್ಷಗಳಲ್ಲಿ ಬಹುತೇಕ ಕಾರ್ಯ ಮುಗಿಯುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದರು. ಭರವಸೆ ಕೊಟ್ಟೂ ಹಣ ನಿಗದಿ ಆಗದಿರುವ ಬಗ್ಗೆ ಅವರಿಗೆ ಸಹಜವಾಗಿ ನಿರಾಸೆ ಆಗಿದೆ. ಇನ್ನೊಮ್ಮೆ ಶಾಸಕರ ನಿಯೋಗ ಕರೆದೊಯ್ಯುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.