ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Budget: ಗ್ಯಾರಂಟಿ ಯೋಜನೆ– 1.03 ಕೋಟಿ ಕುಟುಂಬಗಳಿಗೆ ಮಾಸಿಕ ₹4– ₹5 ಸಾವಿರ ನೆರವು
LIVE

Published : 7 ಜುಲೈ 2023, 3:01 IST
Last Updated : 7 ಜುಲೈ 2023, 10:57 IST
ಫಾಲೋ ಮಾಡಿ
09:4207 Jul 2023

ತೆರಿಗೆ ಪ್ರಸ್ತಾವನೆಗಳು

09:1107 Jul 2023
ಕರ್ನಾಟಕ ಭೂ-ಕಂದಾಯ ಕಾಯಿದೆಯ ಸೆಕ್ಷನ್‌ 95ಕ್ಕೆ ತಿದ್ದುಪಡಿ ತಂದು ಜಮೀನನ್ನು ಸ್ವಯಂ ಘೋಷಣೆಯ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು.
ಸಿದ್ದರಾಮಯ್ಯ
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 10 ಸಾವಿರ ರೂ. ಗಳಿಂದ 12 ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು. ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟಾಗ ನೀಡಲಾಗುವ ಕುಟುಂಬ ಮಾಸಾಶನ ಮೊತ್ತವನ್ನು ಮೂರು ಸಾವಿರ ರೂ. ಗಳಿಂದ ಆರು ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು.
ಸಿದ್ದರಾಮಯ್ಯ
ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಮತ್ತು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ದಿ ಕೈಗೊಳ್ಳುವ ದೃಷ್ಟಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು.
ಸಿದ್ದರಾಮಯ್ಯ

ನಗರಾಭಿವೃದ್ಧಿ ಸಿಕ್ಕಿದ್ದೇನು? 

08:5707 Jul 2023

ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ

08:5207 Jul 2023

ಮಹಿಳಾ ಮತ್ತು ಮಕ್ಕಳ ಕಲ್ಯಾಣ

08:4707 Jul 2023

ವೈದ್ಯಕೀಯ ಶಿಕ್ಷಣ

08:3807 Jul 2023

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

08:3207 Jul 2023

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ

08:1207 Jul 2023
ಬ್ರಾಂಡ್ ಬೆಂಗಳೂರುಗೆ ಭರ್ಜರಿ ಕೊಡುಗೆ
ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿದೆ. ಜತೆಗೆ 2026ಕ್ಕೆ ವಿಮಾನ ನಿಲ್ದಾಣ ಮಾರ್ಗದ ಮೆಟ್ರೊ ಸಂಚಾರ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ. ‘ನಗರೋತ್ಥಾನ, ಅಧಿಕ ಸಾಂದ್ರತೆಯ ಕಾರಿಡಾರ್, ವೈಟ್ ಟಾಪಿಂಗ್‌ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸದ್ಯ ಪ್ರಗತಿಯಲ್ಲಿರುವ ಯೋಜನೆಗಳಿಗೆ ₹12ಸಾವಿರ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಂಚಾರ ದಟ್ಟಣೆ ನಿವಾರಣೆಗೆ ನಮ್ಮ ಮೆಟ್ರೊ ಯೋಜನೆ ಹಾಗೂ ಉಪನಗರ ರೈಲು ಯೋಜನೆಗಳಿಗಾಗಿ ₹30ಸಾವಿರ ಕೋಟಿ ನೀಡುವುದಾಗಿ ಹೇಳಿದೆ. ಬೈಯಪ್ಪನಹಳ್ಳಿ ಪ್ರದೇಶದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಅನುಕೂಲವಾಗುವಂತೆ ಬೈಯಪ್ಪನಹಳ್ಳಿ– ಕೃಷ್ಣರಾಜಪುರ, ಕೆಂಗೇರಿ– ಚಳ್ಳಘಟ್ಟ, ನಾಗಸಂದ್ರ– ಮಾದಾವರ, ಆರ್‌.ವಿ.ರಸ್ತೆ– ಬೊಮ್ಮಸಂದ್ರ ಸೇರಿದಂತೆ ಒಟ್ಟು 27 ಕಿ.ಮೀ. ಉದ್ದದ ನೂತನ ಮೆಟ್ರೋ ಮಾರ್ಗ ಆರಂಭಕ್ಕೆ ಕ್ರಮ ₹263 ಕೋಟಿ ವೆಚ್ಚದ ಮೇಲ್ಸೇತುವೆ ನಿರ್ಮಾಣ. ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ. ಮೆಟ್ರೊ ಸಂಪರ್ಕ ಜಾಲವನ್ನು 176 ಕಿ.ಮೀಗೆ ವಿಸ್ತರಣೆಗೆ ಕ್ರಮ. 2026ರಲ್ಲಿ ವಿಮಾನನಿಲ್ದಾಣ ಮೆಟ್ರೊ ಲೈನ್ ಕಾರ್ಯಾರಂಭ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೇಲ್ದರ್ಜೆಗೆ ₹1411ಕೋಟಿ ಅನುದಾನ, 100 ಕಿ.ಮೀ. ರಸ್ತೆಗಳ ವೈಟ್ ಟಾಪಿಂಗ್‌ಗೆ ₹800 ಕೋಟಿ ಅನುದಾನ ಘೋಷಿಸಲಾಗಿದೆ. ಅಧಿಕ ಸಂಚಾರ ದಟ್ಟಣೆ ಇರುವ 192 ಕಿ.ಮೀ. ಉದ್ದದ 12 ಪ್ರಮುಖ ರಸ್ತೆಗಳಾದ ‘ಹೈ ಡೆನ್ಸಿಟಿ ಕಾರಿಡಾರ್‌’ ಅಭಿವೃದ್ಧಿಗೆ ₹273 ಕೋಟಿ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ ರಾಜಕಾಲುವೆ ಒತ್ತುವರಿಯನ್ನು ಕಂದಾಯ ಇಲಾಖೆ ಗುರುತಿಸಿದ ಸ್ಥಳಗಳಲ್ಲಿ ತೆರವಿಗೆ ಕ್ರಮ ವಹಿಸುವುದಾಗಿಯೂ ಬಜೆಟ್‌ನಲ್ಲಿ ಹೇಳಲಾಗಿದೆ.
08:1107 Jul 2023

ಜಲಸಂಪನ್ಮೂಲ: ಅನುದಾನ 25,000 – 40,000 ಕೋಟಿ ರೂ. ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ

08:0307 Jul 2023

ಸಹಕಾರ: ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂ. ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಳ 

ADVERTISEMENT
ADVERTISEMENT