ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Union Budget | ಪ್ರಮುಖ ಉದ್ಯಮಿಗಳ ಪ್ರತಿಕ್ರಿಯೆಗಳು

Published : 23 ಜುಲೈ 2024, 14:20 IST
Last Updated : 23 ಜುಲೈ 2024, 14:20 IST
ಫಾಲೋ ಮಾಡಿ
Comments
ಬಜೆಟ್ ಭಾರತವನ್ನು ಜ್ಞಾನ, ತಂತ್ರಜ್ಞಾನ ಚಾಲಿತ ಆರ್ಥಿಕತೆಯತ್ತ ಕೊಂಡೊಯ್ಯಲಿದ್ದು, ಸುಸ್ಥಿರ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ದೇಶದ ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.
-ಪವನ್ ಮುಂಜಾಲ್, ಅಧ್ಯಕ್ಷ, ಹೀರೊ ಮೋಟೊಕಾರ್ಪ್‌
ಇದು ದೂರದೃಷ್ಟಿಯ ಬಜೆಟ್ ಆಗಿದೆ. ಉದ್ಯೋಗ ಸೃಷ್ಟಿ, ಎಂಎಸ್‌ಎಂಇಗಳು, ಕೌಶಲ್ಯ ಮತ್ತು ಮಹಿಳಾ ಸಬಲೀಕರಣದಂತಹ ಈಗಿನ ಆದ್ಯತೆಗಳನ್ನು ಉತ್ತೇಜಿಸುತ್ತದೆ.
-ಹಿಸಾಶಿ ಟೇಕುಚಿ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ, ಮಾರುತಿ ಸುಜುಕಿ ಇಂಡಿಯಾ
ಅಂತರ್ಗತ ಬಜೆಟ್ ಇದಾಗಿದ್ದು, ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯದ ಮೇಲೆ ಆದ್ಯತೆ ಹೊಂದಿದೆ. ಕೃಷಿ ಹಾಗೂ ಉತ್ಪಾದನೆಯ ನಡುವೆ ಸಮತೋಲನವನ್ನು ಕಾಪಾಡಿಕೊಂಡಿದೆ.
-ಅನೀಶ್ ಷಾ, ಅಧ್ಯಕ್ಷ, ಎಫ್‌ಐಸಿಸಿಐ
ಹೊಸ ಸರ್ಕಾರ ಚೊಚ್ಚಲ ಬಜೆಟ್, ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುವುದರೊಂದಿಗೆ ಸುಸ್ಥಿರ ಬೆಳವಣಿಗೆಗೆ ಸಮಗ್ರ ಮಾರ್ಗಸೂಚಿಯನ್ನು ಹೊಂದಿದೆ. ಸಮಾಜದ ಎಲ್ಲ ವಿಭಾಗಕ್ಕೂ ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ.
-ಸಂಜೀವ್ ಪುರಿ, ಅಧ್ಯಕ್ಷ, ಸಿಐಐ
ಮೋದಿ 3.0 ಬಜೆಟ್‌ನಲ್ಲಿ ವಿತ್ತೀಯ ಕೊರತೆ ತಗ್ಗಿಸಲು ಒತ್ತು ನೀಡಲಾಗಿದ್ದು, ಶೇಕಡ 4.9ಕ್ಕೆ ನಿಗದಿಪಡಿಸಲಾಗಿದೆ. ಕೃಷಿ ವಲಯ ಹಾಗೂ ವಸತಿ ಮೂಲಸೌಕರ್ಯಗಳ ಮೇಲೆ ಗಮನ ಹರಿಸಲಾಗಿದೆ.
-ಅಶೋಕ್ ಹಿಂದುಜಾ, ಅಧ್ಯಕ್ಷ, ಹಿಂದುಜಾ ಗ್ರೂಪ್ ಆಫ್ ಕಂಪನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT