ಬೆಂಗಳೂರು: ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕಾ ಬಹುರಾಷ್ಟ್ರೀಯ ಕಂಪನಿ ಏಸರ್, ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಹೊಸದಾಗಿ ತನ್ನ 210ನೇ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಿದೆ.

ಮಳಿಗೆಯಲ್ಲಿ ಏಸರ್ನ ಸ್ಲೀಪ್ ಲ್ಯಾಪ್ಟಾಪ್ಗಳು, ಡೆಸ್ಕ್ಟಾಪ್ಗಳು, ಮಾನಿಟರ್ಗಳು, ಗೇಮಿಂಗ್ ಡಿವೈಸ್ಗಳು, ಏಸರ್ಪ್ಯೂರ್ನ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಾಯನ್ಸ್ಗಳಾದ ಟಿ.ವಿಗಳು, ವಾಟರ್, ಏರ್ ಪ್ಯೂರಿಫೈಯರ್ಗಳು, ಏರ್ ಸರ್ಕ್ಯುಲೇಟರ್ ಫ್ಯಾನ್ಗಳು ಸೇರಿದಂತೆ ಗ್ರಾಹಕರಿಗೆ ಏಸರ್ನ ಉಪಕರಣಗಳು ಲಭ್ಯವಿವೆ.

‘ದೇಶದಲ್ಲಿ ಪ್ರಸ್ತುತ 210 ಮಳಿಗೆ ಹೊಂದಿರುವ ಕಂಪನಿ, 2025ರ ಮುಕ್ತಾಯದ ವೇಳೆಗೆ ಮಳಿಗೆಗಳ ಸಂಖ್ಯೆಯನ್ನು 325ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ’ ಎಂದು ಏಸರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕೊಹ್ಲಿ ಹೇಳಿದ್ದಾರೆ.

ಕಾರ್ಪೊರೇಟ್ ಕಚೇರಿಗಳು ಹೆಚ್ಚಿರುವ ಬೆಂಗಳೂರಲ್ಲಿ ಮಳಿಗೆ ಪ್ರಾರಂಭಿಸಿರುವುದು ಸಂತಸ ತಂದಿದೆ. ಏಸರ್ನ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗಿಸಲು ರಿಟೇಲ್ ಮಳಿಗೆ ಪ್ರಾರಂಭಿಸಲಾಗಿದೆ. ಹೆಚ್ಚುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಗುಣಮಟ್ಟದ ಉತ್ಪನ್ನಗಳನ್ನು ನೀಡಲಾಗುವುದು. ಏಸರ್ನ ಎಲ್ಲ ರೀತಿಯ ಕಟಿಂಗ್ ಎಡ್ಜ್ ಪಿಸಿಗಳು, ಏಸರ್ಪ್ಯೂರ್ನ ಗ್ರಾಹಕರ ಅಪ್ಲಾಯನ್ಸ್, ಎಲೆಕ್ಟ್ರಾನಿಕ್ ಉತ್ಪನ್ನಗಳು ಮಳಿಗೆಯಲ್ಲಿ ದೊರೆಯಲಿದೆ ಎಂದು ಹೇಳಿದರು.

ಮಳಿಗೆ ಉದ್ಘಾಟನೆ ಸಮಾರಂಭದಲ್ಲಿ ಕಂಪನಿಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.