ನವದೆಹಲಿ: ಅದಾನಿ ಸಮೂಹದ ಅಂಬುಜಾ ಸಿಮೆಂಟ್ ಕಂಪನಿಯು ಸಿ.ಕೆ. ಬಿರ್ಲಾ ಸಮೂಹದ ಓರಿಯೆಂಟ್ ಸಿಮೆಂಟ್ ಕಂಪನಿಯನ್ನು ₹8,100 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತ ಒಪ್ಪಂದಕ್ಕೆ ಎರಡೂ ಕಂಪನಿಗಳು ಸಹಿ ಹಾಕಿವೆ.

ಅಂಬುಜಾ ಸಿಮೆಂಟ್ ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ತಯಾರಿಕಾ ಕಂಪನಿಯಾಗಿದೆ. ಈ ವರ್ಷದಲ್ಲಿ ಇದು ಕಂಪನಿಯ ಎರಡನೇ ಸ್ವಾಧೀನವಾಗಿದೆ.

ಓರಿಯೆಂಟ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 85 ಲಕ್ಷ ಟನ್ ಆಗಿದೆ. ಈ ಸ್ವಾಧೀನದಿಂದ ಅದಾನಿ ಸಮೂಹದ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವು 9.74 ಕೋಟಿ ಟನ್ಗೆ ಹೆಚ್ಚಲಿದೆ. 2028ರ ವೇಳೆಗೆ 14 ಕೋಟಿ ಟನ್ಗೆ ಹೆಚ್ಚಿಸುವ ಗುರಿ ಹೊಂದಿದೆ.

ಜೂನ್ನಲ್ಲಿ ಅದಾನಿ ಸಮೂಹವು ಹೈದರಾಬಾದ್ ಮೂಲದ ಪೆನ್ನಾ ಸಿಮೆಂಟ್ ಅನ್ನು ₹10,422 ಕೋಟಿಗೆ ಸ್ವಾಧೀನಪಡಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.