ಮುಂಬೈ: ಹುರುನ್ ಇಂಡಿಯಾ 2014ರಲ್ಲಿ ಪ್ರಕಟಿಸಿದ್ದ ದೇಶದ ಸಿರಿವಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರು, 10ನೇ ಸ್ಥಾನದಲ್ಲಿದ್ದರು. ಆಗ ಅವರ ಸಂಪತ್ತಿನ ಮೌಲ್ಯ ₹44 ಸಾವಿರ ಕೋಟಿ ಇತ್ತು.

2024ರ ವರದಿ ಅನ್ವಯ ಕಳೆದ ಒಂದು ವರ್ಷದ ಅವಧಿಯಲ್ಲಿ ಅದಾನಿ ಸಂಪತ್ತು ಶೇ 95ರಷ್ಟು ಏರಿಕೆಯಾಗಿದೆ.

ಉಳಿದ ಸ್ಥಾನದಲ್ಲಿ ಯಾರಿದ್ದಾರೆ?:

ಎಚ್‌ಸಿಎಲ್ ಮುಖ್ಯಸ್ಥ ಶಿವ ನಾಡರ್ (3ನೇ ಸ್ಥಾನ), ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಾಲಾ (4ನೇ ಸ್ಥಾನ) ಹಾಗೂ ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಸಾಂಘ್ವಿ (5ನೇ ಸ್ಥಾನ) ಆ ನಂತರದ ಸ್ಥಾನದಲ್ಲಿದ್ದಾರೆ.

ಸ್ವಂತ ಪರಿಶ್ರಮದಿಂದ ಸಿರಿವಂತರಾದ ಮಹಿಳೆಯರ ಪಟ್ಟಿಯಲ್ಲಿರುವ ಜೋಹೊ ಕಂಪನಿಯ ರಾಧಾ ವೆಂಬು ಅವರು, ₹47,500 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಜೆಪ್ಟೊ ಕಂಪನಿಯ ಸಹ ಸಂಸ್ಥಾಪಕರಾದ ಕೈವಲ್ಯ ವೊಹ್ರಾ (21ನೇ ಸ್ಥಾನ) ಮತ್ತು ಆದಿತ್ ಪಲಿಚ (22ನೇ ಸ್ಥಾನ) ಅವರು ಕಿರಿಯ ವಯಸ್ಸಿನ ಸಿರಿವಂತರಾಗಿದ್ದಾರೆ. ಈ ಇಬ್ಬರು ಕ್ರಮವಾಗಿ ₹3,600 ಹಾಗೂ ₹4,300 ಕೋಟಿ ಸಂಪತ್ತು ಹೊಂದಿದ್ದಾರೆ.

₹1 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿದದವರ ಪಟ್ಟಿಗೆ ಹೊಸದಾಗಿ 220 ವ್ಯಕ್ತಿಗಳು ಸೇರ್ಪಡೆಯಾಗಿದ್ದಾರೆ. ದೇಶದಲ್ಲಿ ಇಷ್ಟು ಮೊತ್ತದ ಆಸ್ತಿ ಹೊಂದಿದವರ ಸಂಖ್ಯೆ 1,539 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.