ನವದೆಹಲಿ: ‘ಏರ್ ಇಂಡಿಯಾ ಮತ್ತು ವಿಸ್ತಾರಾ ವಿಮಾನಯಾನ ಕಂಪನಿಯ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. 90ಕ್ಕೂ ಅಧಿಕ ಸ್ಥಳಗಳಿಗೆ ವಾರದಲ್ಲಿ 5,600ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಏರ್ ಇಂಡಿಯಾ ಸಮೂಹ ತಿಳಿಸಿದೆ.

ಟಾಟಾ ಸಮೂಹ ಮತ್ತು ಸಿಂಗಪುರ ಏರ್ಲೈನ್ಸ್ ಜಂಟಿಯಾಗಿ ವಿಸ್ತಾರಾ ಏರ್ಲೈನ್ಸ್ನ ಮಾಲೀಕತ್ವ ಹೊಂದಿದ್ದವು. ಪ್ರಸ್ತುತ ಈ ವಿಲೀನದಿಂದಾಗಿ ಸಿಂಗಪುರ ಏರ್ಲೈನ್ಸ್ ಕಂಪನಿಯು, ಏರ್ ಇಂಡಿಯಾದಲ್ಲಿ ಶೇ 25.1ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ.

ಅಕ್ಟೋಬರ್ 1ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಎಐಎಕ್ಸ್ ಕನೆಕ್ಟ್ (ಏರ್ ಏಷ್ಯಾ ಇಂಡಿಯಾ) ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದಾದ ಬಳಿಕ ಈ ವಿಲೀನ ಪ್ರಕ್ರಿಯೆಯು ಕಾನೂನಾತ್ಮಕವಾಗಿ ಪೂರ್ಣಗೊಂಡಿದೆ. ವಿಮಾನಯಾನ ಕ್ಷೇತ್ರದಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಆಗಿದೆ ಎಂದು ಹೇಳಿದೆ.

‘ಕಳೆದ ಎರಡು ವರ್ಷದಿಂದ ಈ ನಾಲ್ಕೂ ವಿಮಾನಯಾನ ಕಂಪನಿಗಳು ಒಗ್ಗೂಡಿ ಕಾರ್ಯಾಚರಣೆ ನಡೆಸುತ್ತಿದ್ದವು. ಮುಂದಿನ ದಿನಗಳಲ್ಲೂ ಪ್ರಯಾಣಿಕರಿಗೆ ಉತ್ತಮ ಸೇವೆ ಸಲ್ಲಿಸುವುದೇ ನಮ್ಮ ಗುರಿಯಾಗಿದೆ’ ಎಂದು ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.