ಬೆಂಗಳೂರು: ಅಮೆಜಾನ್ ಇಂಡಿಯಾ ಕಂಪನಿಯು ‘ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಮಾರಾಟದ ಭಾಗವಾಗಿ ಬೆಂಗಳೂರಿನ ಗ್ರಾಹಕರಿಗೆ ಜಯಮಹಲ್ ಪ್ಯಾಲೇಸ್‌ನಲ್ಲಿ ‘ಅಮೆಜಾನ್ ಮೆಟಾವರ್ಲ್ಡ್’ ಅನುಭವ ಕಟ್ಟಿಕೊಡುವ ವ್ಯವಸ್ಥೆಯನ್ನು ರೂಪಿಸಿದೆ.

ಇದು ವರ್ಚವಲ್ ತಾಣವಾಗಿದ್ದು, ಅಮೆಜಾನ್ ಜಗತ್ತಿಗೆ ಪ್ರವೇಶವನ್ನು ಇದು ಒದಗಿಸಲಿದೆ. ಮೆಟಾವರ್ಲ್ಡ್‌ನಲ್ಲಿ ವಿಆರ್ ಹೆಡ್‌ಸೆಟ್‌ಗಳನ್ನು ಧರಿಸಿ ಸಹ ಆಟಗಾರರೊಂದಿಗೆ ಸ್ಪರ್ಧಿಸುತ್ತಲೇ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲಲು ಗ್ರಾಹಕರಿಗೆ ಅವಕಾಶ ಸಿಗುತ್ತದೆ. ಬೈಕ್ ರೇಸ್ ಸೇರಿದಂತೆ ವಿವಿಧ ಗೇಮ್‌ಗಳನ್ನು ಆಡಬಹುದು. ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಮೇಕಪ್, ದಿನಸಿ ಸೇರಿದಂತೆ ಒಂಬತ್ತು ಆಕರ್ಷಕ ವಲಯಗಳು ಇಲ್ಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮಾರುಕಟ್ಟೆಯು ಅಮೆಜಾನ್ ಇಂಡಿಯಾಗೆ ಬಹಳ ಮುಖ್ಯವಾಗಿದೆ. ನಮ್ಮ ಬೆಂಗಳೂರಿನ ಗ್ರಾಹಕರಿಗೆ ಮೆಟಾವರ್ಲ್ಡ್ ಅನುಭವ ಒದಗಿಸಲು ಸಂತೋಷವಾಗುತ್ತಿದೆ ಎಂದು ಅಮೆಜಾನ್ ಇಂಡಿಯಾದ ನಿರ್ದೇಶಕ ನೂರ್ ಪಟೇಲ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.