ನವದೆಹಲಿ (ಪಿಟಿಐ): ಅಮೆಜಾನ್ ಗ್ರಾಹಕರು ₹2,000 ಮುಖಬೆಲೆಯ ನೋಟುಗಳನ್ನು ಬಳಸಿ ತಮ್ಮ ಅಮೆಜಾನ್ ಪೇ ವಾಲೆಟ್ಗೆ ಹಣ ಭರ್ತಿ ಮಾಡಿಕೊಳ್ಳಬಹುದು. ಅಮೆಜಾನ್ ಮೂಲಕ ಯಾವುದಾದರೂ ಉತ್ಪನ್ನವನ್ನು ಕ್ಯಾಷ್–ಆನ್–ಡೆಲಿವರಿ ಆಯ್ಕೆ ಬಳಸಿ ತರಿಸಿಕೊಂಡು, ಆ ಉತ್ಪನ್ನಕ್ಕೆ ಹಣ ಪಾವತಿ ಮಾಡುವ ಸಂದರ್ಭದಲ್ಲಿ, ₹2,000 ನೋಟು ನೀಡಿ ವಾಲೆಟ್ಗೆ ಹಣ ಭರ್ತಿ ಮಾಡಿಕೊಳ್ಳಬಹುದು.

₹2,000 ಮುಖಬೆಲೆಯ ನೋಟುಗಳನ್ನೂ ಒಳಗೊಂಡಂತೆ, ಗ್ರಾಹಕರು ತಿಂಗಳಿಗೆ ಗರಿಷ್ಠ ₹50 ಸಾವಿರದವರೆಗೆ ನಗದು ಜಮಾ ಮಾಡಬಹುದು ಎಂದು ಅಮೆಜಾನ್ ಹೇಳಿದೆ. ‘ಯಾವುದಾದರೂ ಅಂಗಡಿ ₹2,000 ಮುಖಬೆಲೆಯ ನೋಟು ಸ್ವೀಕರಿಸಲು ನಿರಾಕರಿಸಿದರೆ ತಲೆಬಿಸಿ ಮಾಡಿಕೊಳ್ಳಬೇಡಿ. ಕ್ಯಾಷ್–ಆನ್–ಡೆಲಿವರಿ ಆಯ್ಕೆಯ ಮೂಲಕ ಖರೀದಿಸಿದ ಉತ್ಪನ್ನವನ್ನು ನಿಮಗೆ ತಲುಪಿಸಲು ಬರುವ ಅಮೆಜಾನ್ ಡೆಲಿವರಿ ಏಜೆಂಟ್ಗೆ ಆ ನೋಟನ್ನು ನೀವು ನೀಡಬಹುದು’ ಎಂದು ಕಂಪನಿ ಹೇಳಿದೆ.

₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತಿರುವುದಾಗಿ ಆರ್ಬಿಐ ಹೇಳಿದೆ. ಈ ನೋಟುಗಳನ್ನು ಖಾತೆಗೆ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶ ಇದೆ.

ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಗ್ರಾಹಕರು ಮಾತ್ರ ಅಮೆಜಾನ್ ಡೆಲಿವರಿ ಏಜೆಂಟ್ಗೆ ತಮ್ಮಲ್ಲಿನ ₹2,000 ಮುಖಬೆಲೆಯ ನೋಟುಗಳನ್ನು ಕೊಟ್ಟು, ಆ ಹಣವನ್ನು ಅಮೆಜಾನ್ ಪೇ ವಾಲೆಟ್ಗೆ ಭರ್ತಿ ಮಾಡುವಂತೆ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.