ಬೆಂಗಳೂರು: ಚೀನಾ ಮೂಲದ 600 ವಿವಿಧ ಬ್ರ್ಯಾಂಡ್‌ಗಳಿಗೆ ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ವೇದಿಕೆಯಲ್ಲಿ ನಿಷೇಧ ಹೇರಿದೆ. ಜತೆಗೆ ಸುಮಾರು 3000 ಆನ್‌ಲೈನ್ ಸ್ಟೋರ್‌ಗಳನ್ನು ಕೂಡ ಅಮೆಜಾನ್ ಮುಚ್ಚಿದೆ.

ಅಮೆಜಾನ್ ಪಾಲಿಸಿ ನೀತಿಯನ್ನು ಉಲ್ಲಂಘಿಸಿದ ಮತ್ತು ನಕಲಿ ವಿಮರ್ಶೆ, ಕಳಪೆ ಉತ್ಪನ್ನ ಒದಗಿಸಿದ ಆರೋಪ ಚೀನಾ ಮೂಲದ ಹಲವು ಬ್ರ್ಯಾಂಡ್ ಮತ್ತು ಅವುಗಳನ್ನು ಮಾರಾಟ ಮಾಡಿದ ಆನ್‌ಲೈನ್ ಸ್ಟೋರ್‌ಗಳ ಮೇಲಿದೆ.

ಅಮೆಜಾನ್ ವೇದಿಕೆಯನ್ನು ಮತ್ತಷ್ಟು ಗ್ರಾಹಕಸ್ನೇಹಿ ಹಾಗೂ ಗುಣಮಟ್ಟದ ಉತ್ಪನ್ನ ಒದಗಿಸಲು ಸಾಧ್ಯವಾಗುವಂತೆ ಕಂಪನಿ ವಿವಿಧ ಕ್ರಮ ಕೈಗೊಳ್ಳುತ್ತಿದೆ.

ಜತೆಗೆ ಅಮೆಜಾನ್ ಮೂಲಕ ನೋಂದಾಯಿಸಿಕೊಂಡು, ಮಾರಾಟ ನೀತಿಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹೇಳಿಕೆ ನೀಡಿದೆ.

iPhone 13: ಭಾರತಕ್ಕಿಂತ ಕಡಿಮೆ ಬೆಲೆಗೆ ಈ ದೇಶಗಳಲ್ಲಿ ಲಭ್ಯ!

ಚೀನಾದ 600 ಬ್ರ್ಯಾಂಡ್‌ಗಳಿಗೆ ನಿಷೇಧ ಹೇರಿರುವುದು ಚೀನಾ ಮೇಲಿನ ಕ್ರಮವಲ್ಲ, ಬದಲಾಗಿ ಕಳಪೆ ದರ್ಜೆಯ ಉತ್ಪನ್ನ ಮತ್ತು ನಕಲಿ ವಿಮರ್ಶೆ ಮೇಲಿನ ಕ್ರಮ ಎಂದು ಅಮೆಜಾನ್ ಸ್ಪಷ್ಟನೆ ನೀಡಿದೆ.

ನ.1ರ ಬಳಿಕ ಹಳೆಯ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.