ನವದೆಹಲಿ: ವಾಣಿಜ್ಯ ಉದ್ದೇಶದ ಎಸ್ಎಂಎಸ್ಗಳಿಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಒಂದು ವಾರದ ಮಟ್ಟಿಗೆ ಮುಂದೂಡಿದೆ. ಈ ನಿಯಮದ ಕಾರಣದಿಂದಾಗಿ ಸೋಮವಾರ ಬ್ಯಾಂಕಿಂಗ್, ಪಾವತಿ ಕೆಲಸಗಳಿಗೆ ಒಟಿಪಿ (ಒಂದು ಬಾರಿ ಬಳಸುವ ಗುಪ್ತಸಂಖ್ಯೆ) ಸಮರ್ಪಕವಾಗಿ ಬರುತ್ತಿರಲಿಲ್ಲ.

ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಿ ಕೆಲಸ ನಿರ್ವಹಿಸುವ ಈ ನಿಯಮವು, ಅನಗತ್ಯ ಹಾಗೂ ವಂಚನೆಯ ಉದ್ದೇಶದ ಎಸ್ಎಂಎಸ್ಗಳನ್ನು ನಿಗ್ರಹಿಸುವ ಗುರಿ ಹೊಂದಿದೆ. ವಾಣಿಜ್ಯ ಉದ್ದೇಶದ ಎಸ್ಎಂಎಸ್ ರವಾನಿಸುವ ಕಂಪನಿಗಳು ತಮ್ಮ ಸಂದೇಶದ ಸ್ವರೂಪ ಹೇಗಿರುತ್ತದೆ ಎಂಬುದನ್ನು ದೂರಸಂಪರ್ಕ ಸೇವಾ ಕಂಪನಿಗಳಲ್ಲಿ ನೋಂದಾಯಿಸಬೇಕು ಎಂದು ನಿಯಮ ಹೇಳುತ್ತದೆ. ಇಂತಹ ಕಂಪನಿಗಳು ಒಟಿಪಿ ಅಥವಾ ಎಸ್ಎಂಎಸ್ ರವಾನಿಸಿದಾಗ, ಅದನ್ನು ಅವರು ಅದಾಗಲೇ ನೋಂದಾಯಿಸಿರುವ ಎಸ್ಎಂಎಸ್ ಸ್ವರೂಪದ ಜೊತೆ ತಾಳೆ ಮಾಡಿ ನೋಡಲಾಗುತ್ತದೆ.

ಆದರೆ, ಸೋಮವಾರ ಇಂತಹ ಒಟಿಪಿಗಳು ಗ್ರಾಹಕರ ಮೊಬೈಲ್ಗೆ ಸಮರ್ಪಕವಾಗಿ ಬರುತ್ತಿರಲಿಲ್ಲ. ಇದರಿಂದಾಗಿ ಬ್ಯಾಂಕ್ಗಳು ಮತ್ತು ದೂರಸಂಪರ್ಕ ಕಂಪನಿಗಳು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.