ನವದೆಹಲಿ: ಭಾರತದಲ್ಲಿ 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆ್ಯಪಲ್ನ ಐಪ್ಯಾಡ್ ಮಾರಾಟವು ದ್ವಿಗುಣಗೊಂಡಿದೆ ಎಂದು ಕಂಪನಿಯ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಮಾರಾಟ ಮೌಲ್ಯ ₹7.51 ಲಕ್ಷ ಕೋಟಿ ಆಗಿತ್ತು. ಈ ತ್ರೈಮಾಸಿಕದಲ್ಲಿ ₹7.97 ಲಕ್ಷ ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.

‘ಈ ತ್ರೈಮಾಸಿಕದಲ್ಲಿ ಭಾರತದಲ್ಲಿನ ವರಮಾನ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲಾಗಿದೆ. ಈಗಾಗಲೇ, ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಮಳಿಗೆ ತೆರೆಯಲಾಗಿದೆ. ಬೆಂಗಳೂರು, ಪುಣೆ, ದೆಹಲಿ ಮತ್ತು ಮುಂಬೈನಲ್ಲಿ ಹೊಸ ಮಳಿಗೆ ತೆರೆಯಲು ನಿರ್ಧರಿಸಿದ್ದು, ವಿಳಂಬ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಅಮೆರಿಕ, ಬ್ರೆಜಿಲ್, ಮೆಕ್ಸಿಕೊ, ಫ್ರಾನ್ಸ್, ಬ್ರಿಟನ್, ಕೊರಿಯಾ, ಮಲೇಷ್ಯಾ, ಥೈಲ್ಯಾಂಡ್, ಸೌದಿ ಅರೇಬಿಯಾ ಮತ್ತು ಯುಎಇನಲ್ಲಿ ಐಫೋನ್ ಮಾರಾಟದಲ್ಲಿ ಹೆಚ್ಚಳವಾಗಿದ್ದು, ವರಮಾನ ಸಂಗ್ರಹದಲ್ಲಿ ದಾಖಲೆಯಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಾರಾಟವಾಗಿರುವ ಐಫೋನ್ಗಳ ಪೈಕಿ ಆ್ಯಪಲ್ ಕಂಪನಿಯ ಪಾಲು ಶೇ 21.6ರಷ್ಟಿದೆ. ಆ ನಂತರದ ಸ್ಥಾನದಲ್ಲಿ ಸ್ಯಾಮ್ಸಂಗ್ ಕಂಪನಿ ಇದೆ ಎಂದು ಕೌಂಟರ್ಪ್ರಿಂಟ್ ರಿಸರ್ಚ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.