ನವದೆಹಲಿ: ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ವದೇಶಿ ಸಾಧನ ಬಳಸಿ ಐಐಟಿ ಮದ್ರಾಸ್ನಲ್ಲಿ ಅಳವಡಿಸಲಾಗಿರುವ 5ಜಿ ನೆಟ್ವರ್ಕ್ನಲ್ಲಿ ಮೊದಲ ಕರೆಯನ್ನು ಗುರುವಾರ ಮಾಡಿದರು.

‘ಆತ್ಮನಿರ್ಭರ 5ಜಿ. ಐಐಟಿ ಮದ್ರಾಸ್ನಲ್ಲಿ 5ಜಿ ಕರೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ್ದೇನೆ. ಇಡೀ ನೆಟ್ವರ್ಕ್ಅನ್ನು ಭಾರತದಲ್ಲಿಯೇ ರೂಪಿಸಲಾಗಿದೆ, ಅಭಿವೃದ್ಧಿಪಡಿಸಲಾಗಿದೆ’ ಎಂದು ವೈಷ್ಣವ್ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಈ ಕರೆಯನ್ನು ಮಾಡಿದ ನಂತರದಲ್ಲಿ ಸಚಿವರು, ಇದು ಪ್ರಧಾನಿಯವರ ಕನಸಿನ ಸಾಕಾರ ರೂಪ ಎಂದರು. ದೇಶದಲ್ಲಿ 5ಜಿ ಸೇವೆಗಳು ವಾಣಿಜ್ಯಿಕವಾಗಿ ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಶುರುವಾಗುವ ನಿರೀಕ್ಷೆ ಇದೆ.

ಐಐಟಿ ಮದ್ರಾಸ್ ನೇತೃತ್ವದಲ್ಲಿ 5ಜಿ ಪರೀಕ್ಷಾ ಸಾಧನವನ್ನು ಎಂಟು ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.