ಬೆಂಗಳೂರು: ಬ್ಯಾಂಕ್ ಆಫ್ ಬರೋಡ ‘ಬಿಒಬಿ ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ಹೆಸರಿನಲ್ಲಿ ಹೊಸ ಅಭಿಯಾನವೊಂದನ್ನು ಆರಂಭಿಸಿದ್ದು, ಗೃಹ, ವಾಹನ, ಶಿಕ್ಷಣ ಹಾಗೂ ವೈಯಕ್ತಿಕ ಸಾಲದ ಮೇಲೆ ರಿಯಾಯಿತಿಗಳನ್ನು ಪ್ರಕಟಿಸಿದೆ.

ಈ ಅಭಿಯಾನವು ಡಿಸೆಂಬರ್ 31ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ಶೇ 8.40ರಿಂದ ಆರಂಭವಾಗಲಿದೆ. ವಾಹನ ಸಾಲದ ಬಡ್ಡಿ ಶೇ 8.70ರಿಂದ ಆರಂಭವಾಗಲಿದೆ. ಈ ಸಾಲಗಳಿಗೆ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.

ಶಿಕ್ಷಣ ಸಾಲದ ಮೇಲಿನ ಬಡ್ಡಿ ದರವು ಶೇ 8.55ರಿಂದ ಶುರುವಾಗಲಿದೆ. ನಿರ್ದಿಷ್ಟ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದವರು ಸಾಲಕ್ಕೆ ಅಡಮಾನ ಇರಿಸುವ ಅಗತ್ಯ ಇಲ್ಲ ಎಂದು ಪ್ರಕಟಣೆ ತಿಳಿಸಿದೆ. ವೈಯಕ್ತಿಕ ಸಾಲದ ಮೇಲಿನ ಬಡ್ಡಿಯು ಶೇ 10.10ರಿಂದ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.