ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾವು (ಬಿಒಐ) ಹೊಸ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 8.45ರಿಂದ ಶೇ 8.3ಕ್ಕೆ ಇಳಿಸಿದೆ.

ಅಲ್ಲದೆ, ಸಾಲ ಮಂಜೂರಾತಿಯ ಸಂಸ್ಕರಣಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ದೊರೆಯಲಿದೆ. ಈ ತಿಂಗಳ ಅಂತ್ಯದವರೆಗಷ್ಟೇ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. 30 ವರ್ಷದ ಅವಧಿಯ ಸಾಲಕ್ಕೆ ಇಎಂಐ ₹755 ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರ ಶೇ 8.4ರಷ್ಟಿದೆ. ಇವುಗಳಿಗೆ ಹೋಲಿಸಿದರೆ ನಮ್ಮಲ್ಲಿ ಬಡ್ಡಿದರ ತೀರಾ ಕಡಿಮೆ ಇದೆ ಎಂದು ತಿಳಿಸಿದೆ.

ಈ ಸಾಲದ ಜೊತೆಗೆ ಹೊಸ ಮನೆಯ ತಾರಸಿ ಮೇಲೆ ಸೌರ ಫಲಕಗಳ ಅಳವಡಿಕೆಗೆ ಶೇ 7ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಇದಕ್ಕೂ ಸಂಸ್ಕರಣಾ ಶುಲ್ಕವಿಲ್ಲ ಎಂದು ತಿಳಿಸಿದೆ.

ಸಾಲದ ಮೊತ್ತದ ಶೇ 95ರಷ್ಟು ಹಣ ಮಂಜೂರು ಮಾಡಲಾಗುವುದು. ಮರುಪಾವತಿ ಅವಧಿಯನ್ನು 120 ತಿಂಗಳಿಗೆ ನಿಗದಿಪಡಿಸಲಾಗಿದೆ. ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯಡಿ ಲಭಿಸಿರುವ ₹78 ಸಾವಿರ ಸಬ್ಸಿಡಿ ಸೌಲಭ್ಯವನ್ನೂ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.