ನವದೆಹಲಿ : 2017–18ನೇ ಹಣಕಾಸು ವರ್ಷದಲ್ಲಿ 3.95 ಲಕ್ಷ ಟನ್ ಕಾಫಿ ರಫ್ತು ಮಾಡಲಾಗಿದೆ.

‘ಹಿಂದಿನ ಹಣಕಾಸು ವರ್ಷದಲ್ಲಿ ರಫ್ತಾಗಿದ್ದ 3.53 ಲಕ್ಷ ಟನ್‌ಗೆ ಹೋಲಿಸಿದರೆ, ಇದು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸಿ.ಆರ್. ಚೌಧರಿ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

2015–16ನೇ ಹಣಕಾಸು ವರ್ಷದಲ್ಲಿ 3.16 ಲಕ್ಷ ಟನ್ ರಫ್ತು ಮಾಡಲಾಗಿತ್ತು.

‘ಉತ್ಪಾದನೆ ಆಗುತ್ತಿರುವ ಒಟ್ಟಾರೆ ಕಾಫಿಯಲ್ಲಿಶೇ 25 ರಿಂದ ಶೇ 30 ರಷ್ಟು ಮಾತ್ರವೇ ದೇಶದಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದ್ದಾರೆ.

‘ಕಾಫಿ ರಫ್ತು ಅವಲಂಬಿತ ಉದ್ಯಮವಾಗಿದ್ದು,ಜರ್ಮನಿ, ಇಂಡೋನೇಷ್ಯಾ, ಅಮೆರಿಕ, ಪೋಲಂಡ್, ಲಿಬಿಯಾ, ಸ್ಪೇನ್, ಟ್ಯುನಿಷಿಯಾ, ಉಕ್ರೇನ್, ಇಟಲಿ ಮತ್ತು ಬೆಲ್ಜಿಯಂ ದೇಶಗಳಿಂದ ಬೇಡಿಕೆ ಹೆಚ್ಚುತ್ತಿದೆ’ ಎಂದಿದ್ದಾರೆ.

ಎಫ್‌ಡಿಐ: ‘2017–18ನೇ ಹಣಕಾಸು ವರ್ಷದಲ್ಲಿ ₹ 4.21 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದು ಬಂದಿದೆ. 2016–17ರಲ್ಲಿ ₹ 4.09 ಲಕ್ಷ ಕೋಟಿ ಹೂಡಿಕೆಯಾಗಿತ್ತು’ ಎಂದು ಅವರು ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

‘ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಹಾಗೂ ಸುಗಮ ವಹಿವಾಟಿಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಎಫ್‌ಡಿಐ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.