ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಆಗಸ್ಟ್ನಲ್ಲಿ ಶೇಕಡ 3.3ರಷ್ಟು ಆಗಿದೆ. ಕಳೆದ ವರ್ಷದ ಆಗಸ್ಟ್ಗೆ ಹೋಲಿಸಿದರೆ 9 ತಿಂಗಳಲ್ಲಿ ಆಗಿರುವ ಕನಿಷ್ಠ ಮಟ್ಟದ ಬೆಳವಣಿಗೆ ಇದು.

2021ರ ಆಗಸ್ಟ್ನಲ್ಲಿ ಈ ವಲಯಗಳು ಶೇ 12.2ರಷ್ಟು ಬೆಳವಣಿಗೆ ಕಂಡಿದ್ದವು. ಈ ಹಿಂದೆ 2021ರ ನವೆಂಬರ್ನಲ್ಲಿ ವಲಯಗಳ ಬೆಳವಣಿಗೆಯು ಶೇ 3.2ರ ಮಟ್ಟದಲ್ಲಿ ಇತ್ತು.

ಕಚ್ಚಾತೈಲ ಉತ್ಪಾದನೆ ಶೇ 3.3ರಷ್ಟು ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ಶೇ 0.9ರಷ್ಟು ಇಳಿಕೆ ಕಂಡಿದೆ. ಅಂತೆಯೇ, ಕಲ್ಲಿದ್ದಲು, ಸಂಸ್ಕರಿಸಿದ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಉತ್ಪಾದನೆಯೂ ಇಳಿಕೆ ಕಂಡಿದೆ.

ಆದರೆ, ರಸಗೊಬ್ಬರ ಉತ್ಪಾದನೆ ಶೇ 3.1ರಿಂದ ಶೇ 11.9ಕ್ಕೆ ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಆಗಸ್ಟ್ ಅವಧಿಯಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಿಸಿದ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಶೇ 9.8ರಷ್ಟು ಬೆಳವಣಿಗೆ ಕಂಡಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 19.4ರಷ್ಟು ಬೆಳವಣಿಗೆ ಆಗಿತ್ತು.

ಅತಿಯಾದ ಮಳೆಯಿಂದಾಗಿ ವಿದ್ಯುತ್ ಮತ್ತು ನಿರ್ಮಾಣ ಚಟುವಟಿಕೆಗಳ ಬೇಡಿಕೆಯು ಕಡಿಮೆ ಆಗಿದೆ. ಹೀಗಾಗಿ ವಲಯದ ಒಟ್ಟಾರೆ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿರುವಂತೆ ತೋರುತ್ತಿದೆ ಎಂದು ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ.

ಜಿಎಸ್ಟಿ ಇ–ವೇ ಬಿಲ್ ದಾಖಲೆ ಮಟ್ಟದಲ್ಲಿ ಇರುವುದು ಉತ್ತೇಜನಕಾರಿ. ಮೂಲಸೌಕರ್ಯ ವಲಯದ ಬೆಳವಣಿಗೆ ಕಡಿಮೆ ಆಗಿರುವುದರಿಂದ ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಬೆಳವಣಿಗೆಯು ಆಗಸ್ಟ್ನಲ್ಲಿ ಒಂದಂಕಿ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.