ಮುಂಬೈ: ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯು ಮುಂಬರುವ ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಸದ್ಯ ಮಾರುಕಟ್ಟೆಯು ₹ 43 ಲಕ್ಷ ಕೋಟಿ ಗಾತ್ರದಾಗಿದ್ದು 2030ರ ವೇಳೆಗೆ ₹100–₹120 ಲಕ್ಷ ಕೋಟಿಗೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಕ್ರಿಸಿಲ್ ಹೇಳಿದೆ.

ಬಂಡವಾಳ ವೆಚ್ಚ ಹೆಚ್ಚಾಗುತ್ತಿದೆ. ಮೂಲಸೌಕರ್ಯ ವಲಯದ ಚಟುವಟಿಕೆ ಉತ್ತಮವಾಗಿರುವುದು ಮತ್ತು ಸಂಪತ್ತು ಸೃಷ್ಟಿಸುವ ಕಡೆಗೆ ಉಳಿತಾಯವನ್ನು ತೊಡಗಿಸುತ್ತಿರುವುದು ಈ ಮಾರುಕಟ್ಟೆಯ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದೆ. ಕಂಪನಿಗಳು ತಮ್ಮ ವಿವಿಧ ರೀತಿಯ ಬಂಡವಾಳದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಬಾಂಡ್ಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸುತ್ತವೆ.

2023ರ ಮಾರ್ಚ್ ಅಂತ್ಯದವರೆಗೆ ಐದು ವರ್ಷಗಳಲ್ಲಿ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯು ಶೇ 9ರಷ್ಟು ಬೆಳವಣಿಗೆ ಕಂಡು ₹43 ಲಕ್ಷ ಕೋಟಿಗೆ ತಲುಪಿದೆ. 2030ರ ಮಾರ್ಚ್ ವೇಳೆಗೆ ಎರಡು ಪಟ್ಟಿಗೂ ಹೆಚ್ಚು ಬೆಳೆದ ಗರಿಷ್ಠ ₹120 ಲಕ್ಷ ಕೋಟಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅದು ಮಾಹಿತಿ ನೀಡಿದೆ.

ನಿಯಂತ್ರಣ ಸಂಸ್ಥೆಗಳು ಮಧ್ಯಪ್ರವೇಶ ಮಾಡುತ್ತಿರುವುದು ಸಹ ಮಾರುಕಟ್ಟೆಯ ಬೆಳವಣಿಗೆಗೆ ನೆರವಾಗುತ್ತಿದೆ ಎಂದು ಸಂಸ್ಥೆಯ ಹಿರಿಯ ನಿರ್ದೇಶಕ ಸೋಮಶೇಖರ ವೇಮುರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.