ನವದೆಹಲಿ (ಪಿಟಿಐ): ಈ ವರ್ಷದ ಮೇ ತಿಂಗಳಾಂತ್ಯಕ್ಕೆ ದೇಶದಲ್ಲಿ ಕರೆನ್ಸಿಗಳ ಚಲಾವಣೆಯು ₹ 21.71 ಲಕ್ಷ ಕೋಟಿಗೆ ತಲುಪಿದ್ದು, ನೋಟು ರದ್ದತಿ ಮುಂಚಿನ ಚಲಾವಣೆಗಿಂತ ಶೇ 22ರಷ್ಟು ಏರಿಕೆ ದಾಖಲಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕುರಿತು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

2016ರ ನವೆಂಬರ್ 4ರಂದು 17,74,187 ಕೋಟಿ ರೂಪಾಯಿಗಳು ಚಲಾವಣೆಯಲ್ಲಿ ಇದ್ದವು. ಈ ವರ್ಷದ ಮೇ 31ಕ್ಕೆ 21,71,385 ಕೋಟಿ ರೂಪಾಯಿಗಳು ಚಲಾವಣೆಯಲ್ಲಿ ಇವೆ. ನೋಟುಗಳ ಚಲಾವಣೆ 2014ರ ಅಕ್ಟೋಬರ್‌ದಿಂದೀಚೆಗೆ ವರ್ಷದಿಂದ ವರ್ಷಕ್ಕೆ ಶೇ 14.51ರಷ್ಟು ಏರುಗತಿಯಲ್ಲಿ ಇದೆ.

ಬ್ಯಾಂಕ್ ವಂಚನೆ

₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ 2016–17ರಿಂದೀಚೆಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ. ₹ 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳ ಒಟ್ಟಾರೆ ಮೊತ್ತವು 2016–17ರಲ್ಲಿ ₹ 25,884 ಕೋಟಿಗಳಷ್ಟಿತ್ತು ಎಂದು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಆರ್‌ಬಿಐಗೆ ವರದಿ ಮಾಡಿದ್ದವು.

2017–18 ಮತ್ತು 2018–19ರಲ್ಲಿ ಇಂತಹ ಪ್ರಕರಣಗಳ ಮೊತ್ತವು ಕ್ರಮವಾಗಿ ₹ 9,866 ಕೋಟಿ ಮತ್ತು ₹ 6,735 ಕೋಟಿಗೆ ಇಳಿಕೆಯಾಗಿದೆ.

ಐ.ಟಿ ಮರುಪಾವತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಆದಾಯ ತೆರಿಗೆಗೆ ಸಂಬಂಧಿಸಿದಂತೆ ₹ 64,700 ಕೋಟಿ ಮೊತ್ತವನ್ನು ತೆರಿಗೆದಾರರಿಗೆ ಮರು ಪಾವತಿ ಮಾಡಲಾಗಿದೆ. 2018–19ರ ಹಣಕಾಸು ವರ್ಷದಲ್ಲಿ ₹ 1.61 ಲಕ್ಷ ಕೋಟಿ ಮರಳಿಸಲಾಗಿದೆ ಎಂದು ಲೋಕಸಭೆಗೆ ತಿಳಿಸಲಾಗಿದೆ.

2018–19 ಅಂದಾಜು ವರ್ಷದಲ್ಲಿ 6.49 ಕೋಟಿಗೂ ಹೆಚ್ಚು ಎಲೆಕ್ಟ್ರಾನಿಕ್ ರಿಟರ್ನ್ಸ್ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.