ನವದೆಹಲಿ: ಪ್ರಸಕ್ತ ವರ್ಷದ ಜನವರಿ–ಸೆಪ್ಟೆಂಬರ್ ಅವಧಿಯಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿನ ಈಕ್ವಿಟಿ ಹೂಡಿಕೆಯು ಶೇ 46ರಷ್ಟು ಏರಿಕೆಯಾಗಿದ್ದು, ₹74,798 ಕೋಟಿಯಷ್ಟಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ, ಸಿಬಿಆರ್ಇ ತಿಳಿಸಿದೆ.

2018ರಿಂದ ರಿಯಲ್ ಎಸ್ಟೇಟ್ನಲ್ಲಿನ ಈಕ್ವಿಟಿ ಹೂಡಿಕೆಯಲ್ಲಿ ಇದು ಅತ್ಯಧಿಕವಾಗಿದೆ.

ಈಕ್ವಿಟಿ ಹೂಡಿಕೆಯು, ಖಾಸಗಿ ಈಕ್ವಿಟಿ ಫಂಡ್ಸ್, ಪಿಂಚಣಿ ಫಂಡ್, ಸಾವರಿನ್ ವೆಲ್ತ್ ಫಂಡ್, ಸಾಂಸ್ಥಿಕ ಹೂಡಿಕೆದಾರರು, ರಿಯಲ್ ಎಸ್ಟೇಟ್ ಡೆವಲಪರ್ಗಳು, ರಿಯಲ್ ಎಸ್ಟೇಟ್ ಫಂಡ್–ಕಮ್– ಡೆವಲಪರ್ಗಳು, ಹೂಡಿಕೆ ಬ್ಯಾಂಕ್ಗಳು, ಕಾರ್ಪೊರೇಟ್ ಗ್ರೂಪ್ಗಳು, ಆರ್ಇಐಟಿ ಸೇರಿದಂತೆ ಹಲವು ಹೂಡಿಕೆಯನ್ನು ಒಳಗೊಂಡಿದೆ.

2018ರಲ್ಲಿ ₹48,746 ಕೋಟಿ, 2019ರಲ್ಲಿ ₹53,788 ಕೋಟಿ, 2020ರಲ್ಲಿ ₹50,426 ಕೋಟಿ, 2021ರಲ್ಲಿ ₹49,586, 2022ರಲ್ಲಿ ₹65,554 ಕೋಟಿ, 2023ರಲ್ಲಿ ₹62,192 ಕೋಟಿ ಈ ವಲಯದಲ್ಲಿ ಹೂಡಿಕೆಯಾಗಿದೆ.

‘ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿನ ಹೂಡಿಕೆ ಚಟುವಟಿಕೆಯು ಜನವರಿ-ಸೆಪ್ಟೆಂಬರ್ನಲ್ಲಿ ಹೊಸ ಉತ್ತುಂಗಕ್ಕೇರಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಬಂಡವಾಳದ ನಿರಂತರ ಒಳಹರಿವು ನಿರೀಕ್ಷಿಸಲಾಗಿದೆ’ ಎಂದು ಸಿಬಿಆರ್ಇನ ಸಿಇಒ ಅನ್ಶುಮಾನ್ ಮ್ಯಾಗಝೈನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.