ಬೆಂಗಳೂರು: ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ, ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನ ಖರೀದಿಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಆರಂಭಿಕ ಹಂತದಲ್ಲಿ ಸಣ್ಣ ವಾಣಿಜ್ಯ ವಾಹನಗಳು (ಎಸ್ಸಿವಿ) ಮತ್ತು ಲಘು ವಾಣಿಜ್ಯ ವಾಹನಗಳ (ಎಲ್ಸಿವಿ) ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಟಾಟಾ ಮೋಟರ್ಸ್ನ ಎಲ್ಲ ವಾಣಿಜ್ಯ ವಾಹನಗಳಿಗೆ ಹಣಕಾಸು ಸೌಲಭ್ಯ ಒದಗಿಸಲಾಗುವುದು ಎಂದು ಕಂಪನಿ ತಿಳಿಸಿದೆ.

‘ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆಗಿನ ನಮ್ಮ ಪಾಲುದಾರಿಕೆಯು ದೇಶದ ವಿವಿಧ ಹಿನ್ನೆಲೆಯ ನಮ್ಮ ಗ್ರಾಹಕರಿಗೆ ಸುಲಭವಾಗಿ ಹಣಕಾಸು ಸೌಲಭ್ಯವನ್ನು ಒದಗಿಸುವಂತೆ ಮಾಡುತ್ತದೆ. ಈ ಹಣಕಾಸು ಸೌಲಭ್ಯವು ಗ್ರಾಹಕರಿಗೆ ಅವರ ವ್ಯಾಪಾರದ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಸಹಯೋಗವು ಲಾಜಿಸ್ಟಿಕ್ ವಿಭಾಗದಲ್ಲಿ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಟಾಟಾ ಮೋಟರ್ಸ್ನ ಎಸ್ಸಿವಿ ಮತ್ತು ಪಿಯು ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ವಿನಯ್ ಪಾಠಕ್ ಹೇಳಿದರು.

‘ಟಾಟಾ ಮೋಟರ್ಸ್ ಗ್ರಾಹಕರಿಗೆ ಸೂಕ್ತವಾದ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತೇವೆ. ಉದ್ಯಮಿಗಳನ್ನು ಸಬಲೀಕರಣಗೊಳಿಸುವ ನಮ್ಮ ಉದ್ದೇಶದ ಜೊತೆ ಈ ಪಾಲುದಾರಿಕೆಯು ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ನಮ್ಮ ವ್ಯಾಪಕವಾದ ನೆಟ್ವರ್ಕ್ ಮತ್ತು ಹಣಕಾಸು ಕ್ಷೇತ್ರದ ಪರಿಣತಿಯ ಮೂಲಕ ಈ ಪಾಲುದಾರಿಕೆಯು ಗ್ರಾಹಕರ ಅಭಿವೃದ್ಧಿ ಉಂಟು ಮಾಡಲಿದೆ ಮತ್ತು ವಾಣಿಜ್ಯ ವಾಹನ ವ್ಯವಹಾರ ವಿಭಾಗದಲ್ಲಿ ಬೆಳವಣಿಗೆ ಸಾಧಿಸಲು ನೆರವಾಗುತ್ತದೆ’ ಎಂದು ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹೇಮಂತ್ ಕುಮಾರ್ ತಮ್ತಾ ಹೇಳಿದ್ದಾರೆ.

ಲಾಜಿಸ್ಟಿಕ್ಸ್ ಮತ್ತು ಸಮೂಹ ಸಾರಿಗೆಯ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್ಗಳು, ಟ್ರಕ್ಗಳು ಮತ್ತು ಬಸ್ಗಳ ವಿಭಾಗಗಳಲ್ಲಿ ಟಾಟಾ ಮೋಟರ್ಸ್ ಸಂಸ್ಥೆಯು 1 ಟನ್ನಿಂದ ಹಿಡಿದು 55 ಟನ್ಗಳವರೆಗಿನ ಸರಕು ಸಾಗಾಣಿಕೆ ವಾಹನಗಳು ಮತ್ತು 10 ಆಸನಗಳಿಂದ ಹಿಡಿದು 51 ಆಸನಗಳವರೆಗಿನ ಸಮೂಹ ಸಾರಿಗೆ ಉತ್ಪನ್ನಗಳನ್ನು ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.