ನವದೆಹಲಿ: ಭಾರತದಿಂದ ಆಗುವ ರಫ್ತುಗಳ ಪ್ರಮಾಣವು ಏಪ್ರಿಲ್ನಲ್ಲಿ ಶೇಕಡ 12.7ರಷ್ಟು ಕಡಿಮೆ ಆಗಿದ್ದು, 34.66 ಬಿಲಿಯನ್ ಡಾಲರ್ಗೆ (₹2.85 ಲಕ್ಷ ಕೋಟಿ) ತಲುಪಿದೆ. ಇದೇ ಹೊತ್ತಿನಲ್ಲಿ ದೇಶದ ವ್ಯಾಪಾರ ಕೊರತೆ ಅಂತರವು 20 ತಿಂಗಳ ಕನಿಷ್ಠ ಮಟ್ಟವಾದ 15.24 ಬಿಲಿಯನ್ ಡಾಲರ್ಗೆ (₹1.25 ಲಕ್ಷ ಕೋಟಿ) ತಗ್ಗಿದೆ.

ಭಾರತವು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಅಮೆರಿಕ ಮತ್ತು ಯುರೋಪಿನಲ್ಲಿ ಬೇಡಿಕೆ ತಗ್ಗಿರುವುದು ಒಟ್ಟು ರಫ್ತು ಕಡಿಮೆ ಆಗುವುದಕ್ಕೆ ಪ್ರಮುಖ ಕಾರಣ. ಪರಿಸ್ಥಿತಿ ಸುಧಾರಿಸಲು ಕೆಲವು ತಿಂಗಳುಗಳು ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಯುರೋಪಿನಲ್ಲಿ ಬೇಡಿಕೆ ಅಷ್ಟೇನೂ ಚೆನ್ನಾಗಿಲ್ಲ. ಅಮೆರಿಕದಲ್ಲಿಯೂ ಬೇಡಿಕೆ ಕಡಿಮೆ ಆಗಿದೆ. ಮುಂದಿನ 2–3 ತಿಂಗಳಮಟ್ಟಿಗೆ ಬೇಡಿಕೆಯು ತೀರಾ ಆಶಾದಾಯಕವಾಗಿ ಇರುವುದಿಲ್ಲ’ ಎಂದು ವಿದೇಶ ವ್ಯಾಪಾರದ ಮಹಾನಿರ್ದೇಶಕ (ಡಿಜಿಎಫ್ಟಿ) ಸಂತೋಷ್ ಕುಮಾರ್ ಸಾರಂಗಿ ತಿಳಿಸಿದ್ದಾರೆ.

ಸೆಪ್ಟೆಂಬರ್ ನಂತರ ಪರಿಸ್ಥಿತಿ ಬದಲಾಗಲಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಆಮದು ಪ್ರಮಾಣವು ಶೇ 14ರಷ್ಟು ಕಡಿಮೆ ಆಗಿದ್ದು, 49.9 ಬಿಲಿಯನ್ ಡಾಲರ್ಗೆ (₹4.10 ಲಕ್ಷ ಕೋಟಿ) ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.