ಕೋಲ್ಕತ್ತ: ವೈವಿಧ್ಯಮಯ ವಹಿವಾಟಿನಲ್ಲಿ ತೊಡಗಿರುವ ಐಟಿಸಿ ಉದ್ದಿಮೆ ಸಮೂಹವು ತನ್ನ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜೀವ್ ಪುರಿ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಸಂಸ್ಥೆಯ ಷೇರುದಾರರ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ‘ಬಂಡವಾಳ ಹೂಡಿಕೆ ಹೆಚ್ಚಳ ಮತ್ತು ಸ್ವಾಧೀನ ಪ್ರಕ್ರಿಯೆ ಮೂಲಕ ವಹಿವಾಟು ವಿಸ್ತರಣೆ ಮಾಡಲಾಗುವುದು. ಸದ್ಯಕ್ಕೆ ಸಂಸ್ಥೆಯ ವಹಿವಾಟಿನ ಶೇ 25ರಷ್ಟು ವರಮಾನವು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳಿಂದ (ಎಫ್ಎಂಸಿಜಿ) ಬರುತ್ತಿದೆ. ಈ ಕ್ಷೇತ್ರದಲ್ಲಿನ ಹೊಸ ವಿಭಾಗದತ್ತ ಇನ್ನು ಮುಂದೆ ಗಮನ ಕೇಂದ್ರೀಕರಿಸಲಾಗುವುದು.

‘ಸಂಸ್ಥೆಯ ವಾರ್ಷಿಕ ವಹಿವಾಟು ಸದ್ಯಕ್ಕೆ ₹ 18 ಸಾವಿರ ಕೋಟಿಗಳಷ್ಟಿದೆ. ಹಲವಾರು ಬ್ರ್ಯಾಂಡ್ಗಳಲ್ಲಿ ಬಹುಕೋಟಿ ಮೊತ್ತದ ಮಾರಾಟ ನಡೆಯುತ್ತಿದೆ. ಆಶೀರ್ವಾದ ಬ್ರ್ಯಾಂಡ್ ₹ 4,500 ಕೋಟಿ, ಸನ್ಫೀಸ್ಟ್ ₹ 3,800 ಕೋಟಿ, ಬಿಂಗೋ ₹ 2,500 ಕೋಟಿ ವಹಿವಾಟು ನಡೆಸುತ್ತಿರುವುದು ಕೆಲ ನಿದರ್ಶನಗಳಾಗಿವೆ’ ಎಂದು ಹೇಳಿದ್ದಾರೆ.

ದೇಶಿ ಆರ್ಥಿಕತೆ ಬೆಳವಣಿಗೆಯ ಎಂಜಿನ್ ಆಗಿ ಕಾರ್ಯನಿರ್ವಹಿಸುವುದು ಸಂಸ್ಥೆಯ ಉದ್ದೇಶವಾಗಿದೆ.
-ಸಂಜೀವ್ ಪುರಿ,ಐಟಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.