ನವದೆಹಲಿ: ಸೆಮಿಕಂಡಕ್ಟರ್ ಪೂರೈಕೆ ಸಮಸ್ಯೆ ತಗ್ಗಿರುವುದರ ಜೊತೆಗೆ ಹಬ್ಬದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ದೇಶಿ ಪ್ರಯಾಣಿಕ ವಾಹನಗಳ ಸೆಪ್ಟೆಂಬರ್ ತಿಂಗಳ ಮಾರಾಟವು ಏರಿಕೆ ಕಂಡಿದೆ.

ಸೆಪ್ಟೆಂಬರ್ನಲ್ಲಿ 3.55 ಲಕ್ಷ ವಾಹನಗಳು ಮಾರಾಟ ಆಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ಗೆ ಹೋಲಿಸಿದರೆ ಶೇ 91ರಷ್ಟು ಏರಿಕೆ ಕಂಡುಬಂದಿದೆ.

ಮಾರುತಿ ಸುಜುಕಿ ಇಂಡಿಯಾ, ಹುಂಡೈ ಮತ್ತು ಟಾಟಾ ಮೋಟರ್ಸ್ ಸೇರಿದಂತೆ ಪ್ರಮುಖ ಕಂಪನಿಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.

ಮಾರುತಿ ಸುಜುಕಿ ಇಂಡಿಯಾದ ಪ್ರಯಾಣಿಕ ವಾಹನಗಳ ಮಾರಾಟವು 63,111 ರಿಂದ 1.48 ಲಕ್ಷಕ್ಕೆ ಏರಿಕೆಯಾಗಿದೆ.

42 ತಿಂಗಳುಗಳ ಅವಧಿಯಲ್ಲಿ ಕಂಪನಿಗೆ ಎರಡನೇ ಉತ್ತಮ ತಿಂಗಳು ಇದಾಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

2020ರ ಅಕ್ಟೋಬರ್ನಲ್ಲಿ 1.63 ಲಕ್ಷ ವಾಹನಗಳು ಮಾರಾಟ ಆಗಿದ್ದವು ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಕಂಪನಿಯ ಮಾರುಕಟ್ಟೆ ಷೇರುಪಾಲು ಶೇ 42ರಷ್ಟು ಆಗಿದೆ. 2021ರ ಸೆಪ್ಟೆಂಬರ್ಗೆ ಹೋಲಿಸಿದರೆ ಶೇ 7.8ರಷ್ಟು ಏರಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟವು 10 ಲಕ್ಷದ ಗಡಿ ದಾಟಿದೆ. ಆರು ತಿಂಗಳ ಅವಧಿಯಲ್ಲಿನ ಮಾರಾಟವು 19.37 ಲಕ್ಷ ತಲುಪಿದೆ ಎಂದಿದ್ದಾರೆ.

ಹುಂಡೈ ಮೋಟರ್ ಇಂಡಿಯಾದ ಮಾರಾಟವು ಶೇ 50ರಷ್ಟು ಹೆಚ್ಚಾಗಿ 49,700ಕ್ಕೆ ತಲುಪಿದೆ.

ಕಳೆದ ಕೆಲವು ತ್ರೈಮಾಸಿಕಗಳಲ್ಲಿ ದೇಶದ ಆರ್ಥಿಕತೆಯು ತೋರಿದ ಬೆಳವಣಿಗೆ ಹಾಗು ಹಬ್ಬದ ಋತುವಿನ ಬೇಡಿಕೆಯು ಮಾರಾಟದಲ್ಲಿ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹುಂಡೈ ಮೋಟರ್ ಇಂಡಿಯಾದ ನಿರ್ದೇಶಕ ತರುಣ್ ಗರ್ಗ್ ಹೇಳಿದ್ದಾರೆ.

ಟಾಟಾ ಮೋಟರ್ಸ್ನ ಪ್ರಯಾಣಿಕ ವಾಹನ ಮಾರಾಟವು 47,654ಕ್ಕೆ ತಲುಪಿದ್ದು, ತಿಂಗಳೊಂದರ ಗರಿಷ್ಠ ಮಟ್ಟ ಇದಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.

ಹೋಂಡಾ ಕಾರ್ಸ್ ಇಂಡಿಯಾದ ಮಾರಾಟವು ಶೇ 29ರಷ್ಟು ಹೆಚ್ಚಾಗಿ 8,714ಕ್ಕೆ ಏರಿಕೆ ಕಂಡಿದೆ.

ಟೊಯೋಟ ಕಿರ್ಲೋಸ್ಕರ್ ಮೋಟರ್ನ ಸಗಟು ಮಾರಾಟವು ಶೇ 66ರಷ್ಟು ಹೆಚ್ಚಾಗಿದೆ. ಸ್ಕೋಡಾ ಆಟೊ ಇಂಡಿಯಾದ ಮಾರಾಟ ಶೇ 17ರಷ್ಟು, ಫೋಕ್ಸ್ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ಮಾರಾಟ ಶೇ 60ರಷ್ಟು ಏರಿಕೆ ಕಂಡಿದೆ.

ದ್ವಿಚಕ್ರ ವಾಹನ: ದ್ವಿಚಕ್ರ ವಾಹನ ವಿಭಾಗದಲ್ಲಿ, ಹೀರೊ ಮೊಟೊಕಾರ್ಪ್ ಕಂಪನಿಯ ಮಾರಾಟವು 5.05 ಲಕ್ಷದಿಂದ 5.07 ಲಕ್ಷಕ್ಕೆ ಅಲ್ಪ ಏರಿಕೆ ಕಂಡಿದೆ.

ಟಿವಿಎಸ್ ಮೋಟರ್ ಕಂಪನಿಯ ಮಾರಾಟವು ಶೇ 16ರಷ್ಟು ಹೆಚ್ಚಾಗಿದ್ದು 2.83 ಲಕ್ಷಕ್ಕೆ ತಲುಪಿದೆ. ರಾಯಲ್ ಎನ್ಫೀಲ್ಡ್ ಮಾರಾಟವು ಎರಡು ಪಟ್ಟು ಹೆಚ್ಚಾಗಿದ್ದು 82,097ಕ್ಕೆ ತಲುಪಿದೆ.

ಸುಜುಕಿ ಮೋಟರ್ಸೈಕಲ್ ಕಂಪನಿ ಯ ಒಟ್ಟಾರೆ ಮಾರಾಟ ಶೇ 27.55ರಷ್ಟು ಏರಿಕೆ ಕಂಡು 86,750ಕ್ಕೆ ತಲುಪಿದೆ. ದೇಶಿ ಮಾರಾಟವು 14,738ಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.