ನವದೆಹಲಿ: ಸಂಪೂರ್ಣವಾಗಿ ಎಥೆನಾಲ್ ಬಳಸಿ ಚಲಿಸಬಲ್ಲ ಹೈಬ್ರಿಡ್ ಕಾರನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಅನಾವರಣ ಮಾಡಿದರು. ಟೊಯೊಟ ಕಂಪನಿ ಅಭಿವೃದ್ಧಿಪಡಿಸಿರುವ ಈ ಕಾರು ಎಥೆನಾಲ್ ಮಾತ್ರವಲ್ಲದೆ ವಿದ್ಯುತ್ ಬಳಸಿಯೂ ಚಲಿಸಬಲ್ಲದು.

ಕೊರೊಲಾ ಆಲ್ಟಿಸ್ ಎಫ್‌ಎಫ್‌ವಿ–ಎಸ್‌ಎಚ್‌ಇವಿ ಹೆಸರಿನ ಈ ಕಾರನ್ನು ಟೊಯೊಟ ಕಂಪನಿಯು ಪ್ರಯೋಗಾರ್ಥವಾಗಿ ಅನಾವರಣ ಮಾಡಿದೆ. ಇದನ್ನು ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.

ದೇಶದಲ್ಲಿ ಮಾಲಿನ್ಯಕ್ಕೆ ಸಾರಿಗೆ ವಲಯದ ಕೊಡುಗೆಯೂ ಇದೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಜೈವಿಕ ಇಂಧನ ಬಳಸಿ ಚಲಿಸುವ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕಾದ ಅಗತ್ಯ ಇದೆ ಎಂದು ಗಡ್ಕರಿ ಹೇಳಿದ್ದಾರೆ.

ಈ ಕಾರಿನಲ್ಲಿ ವಿದ್ಯುತ್ ಚಾಲಿತ ಮೋಟರ್ ಹಾಗೂ ಜೈವಿಕ ಇಂಧನ ಬಳಸುವ ಎಂಜಿನ್ ಅಳವಡಿಸಲಾಗಿದೆ. ಇದು ವಿದ್ಯುತ್ ಚಾಲಿತ ಮೋಟರ್ ಬಳಸಿ ಗಣನೀಯ ಅವಧಿಯವರೆಗೆ ಚಲಿಸಬಲ್ಲದು. ಅಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇರುವ ಇಂಧನ ಬಳಸಿಯೂ ಚಲಿಸಬಲ್ಲದು.

ಈ ಕಾರಿನಲ್ಲಿ ಸಾಮಾನ್ಯವಾಗಿ ಪೆಟ್ರೋಲ್‌ಗೆ ಎಥೆನಾಲ್ ಅಥವಾ ಮಿಥೆನಾಲ್ ಮಿಶ್ರಣ ಮಾಡಿ, ಇಂಧನವಾಗಿ ಬಳಸಲಾಗುತ್ತದೆ. ಬ್ರೆಜಿಲ್, ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಇಂತಹ ವಾಹನಗಳು ಮಾರುಕಟ್ಟೆಯಲ್ಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.