ನವದೆಹಲಿ: 2021–22ನೇ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯು ದಾಖಲೆಯ ಶೇಕಡ 11ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಆರ್ಥಿಕ ಸಮೀಕ್ಷೆಯು ಅಂದಾಜಿಸಿದೆ. ಕೋವಿಡ್–19 ಸಾಂಕ್ರಾಮಿಕಕ್ಕೆ ಮೊದಲಿನ ಸಂದರ್ಭದಲ್ಲಿ ಕೂಡ ದೇಶವು ಈ ಪರಿಯ ಬೆಳವಣಿಗೆ ಪ್ರಮಾಣವನ್ನು ಯಾವತ್ತೂ ಕಂಡಿರಲಿಲ್ಲ.

ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ತಾನು ಮಾಡುವ ವೆಚ್ಚವನ್ನು ಹೆಚ್ಚಿಸಿ, ಆ ಮೂಲಕ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಸಮೀಕ್ಷೆ ಸಲಹೆ ಮಾಡಿದೆ.

ಹಾಲಿ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಶೇ (–) 7.7ರಷ್ಟು ಕುಸಿತ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ಸ್ವತಂತ್ರ ಭಾರತ ಕಾಣಲಿರುವ ಅತ್ಯಂತ ದೊಡ್ಡ ಮಟ್ಟದ ಕುಸಿತ. 1979–80ರಲ್ಲಿ ದೇಶದ ಜಿಡಿಪಿ ಶೇ (–)5.2ರಷ್ಟು ಕುಸಿತ ಕಂಡಿತ್ತು.

2021–22ನೇ ಆರ್ಥಿಕ ವರ್ಷದಲ್ಲಿ ಭಾರತವು ಶೇ 11.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಆರ್ಥಿಕ ಸಮೀಕ್ಷೆಯ ಅಂದಾಜು ಐಎಂಎಫ್ನ ಅಂದಾಜಿಗೆ ಸಮೀಪವಾಗಿದೆ. ‘ದೇಶದ ಅರ್ಥ ವ್ಯವಸ್ಥೆಯ ಮೂಲ ಅಂಶಗಳು ಬಲಿಷ್ಠವಾಗಿಯೇ ಇವೆ. ಲಾಕ್ಡೌನ್ ನಿಯಮಗಳನ್ನು ಹಂತ ಹಂತವಾಗಿ ಸಡಿಲಿಸುತ್ತ ಬಂದಿರುವುದು ಹಾಗೂ ಆತ್ಮನಿರ್ಭರ ಭಾರತ ಕಾರ್ಯಕ್ರಮದ ಭಾಗವಾಗಿ ನೀಡಿದ ಬೆಂಬಲಗಳು ಅರ್ಥ ವ್ಯವಸ್ಥೆಯನ್ನು ಪುನಶ್ಚೇತನದ ಹಾದಿಗೆ ತಂದಿವೆ’ ಎಂದು ವರದಿ ಅಭಿಪ್ರಾಯ ವ್ಯಕ್ತಪಡಿಸಿದೆ.

ನಿಯಂತ್ರಣ ವ್ಯವಸ್ಥೆ ಬೇಕು:ಭಾರತದಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರ ದೊಡ್ಡದಾಗಿ ಇರುವ ಕಾರಣ ಈ ವಲಯಕ್ಕೆ ಪ್ರತ್ಯೇಕ ನಿಯಂತ್ರಣ ವ್ಯವಸ್ಥೆ ಬೇಕು ಎಂದು ಸಮೀಕ್ಷೆಯು ಸಲಹೆ ನೀಡಿದೆ. ಆರೋಗ್ಯ ಸೇವೆಗಳನ್ನು ಒದಗಿಸುವ ವೈದ್ಯರು ಮತ್ತು ಆಸ್ಪತ್ರೆಗಳ ಗುಣಮಟ್ಟವನ್ನು ಪರಿಶೀಲಿಸಲು ಸಂಸ್ಥೆಗಳನ್ನು ಹುಟ್ಟುಹಾಕಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಅರ್ಥ ವ್ಯವಸ್ಥೆಯ ಒಟ್ಟಾರೆ ಬೆಳವಣಿಗೆಗೆ ಮೂಲಸೌಕರ್ಯ ವಲಯ ಮಹತ್ವದ್ದು. ‘ಮೂಲಸೌಕರ್ಯಗಳು ದೇಶದ ಬೆಳವಣಿಗೆಗೆ ನೆಲೆಗಟ್ಟು ಇದ್ದಂತೆ. ಅಗತ್ಯ ಮೂಲಸೌಲಭ್ಯ ಇಲ್ಲದಿದ್ದರೆ ಅರ್ಥ ವ್ಯವಸ್ಥೆಗೆ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಆಗುವುದಿಲ್ಲ’ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.