ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಳು, ಚಿನ್ನಾಭರಣ ರಫ್ತು ಶೇ 5ರಷ್ಟು ಇಳಿಕೆ

Published 15 ಜೂನ್ 2024, 15:54 IST
Last Updated 15 ಜೂನ್ 2024, 15:54 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಮೇ ತಿಂಗಳಿನಲ್ಲಿ ₹20,713 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತು ಮಾಡಲಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ರಫ್ತು ಮೌಲ್ಯ ₹21,795 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಶೇ 5ರಷ್ಟು ಇಳಿಕೆಯಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿಯು (ಜಿಜೆಇಪಿಸಿ) ತಿಳಿಸಿದೆ.

ಆದಾಗ್ಯೂ, ಚಿನ್ನಾಭರಣ ರಫ್ತು ಪ್ರಮಾಣವು ಶೇ 13.1ರಷ್ಟು ಏರಿಕೆಯಾಗಿದ್ದು, ₹5,507 ಕೋಟಿ ಆಗಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ₹4,807 ಕೋಟಿ ಮೌಲ್ಯದ ಚಿನ್ನಾಭರಣ ರಫ್ತು ಮಾಡಲಾಗಿತ್ತು.  

ಬೆಳ್ಳಿ ಆಭರಣಗಳ ರಫ್ತು ಮೌಲ್ಯವು ₹665 ಕೋಟಿಯಿಂದ ₹1,103 ಕೋಟಿಗೆ ಹೆಚ್ಚಳವಾಗಿದೆ. ಆದರೆ, ಕಟ್‌ ಹಾಗೂ ಪಾಲಿಷ್‌ ಮಾಡಿದ ವಜ್ರಗಳ ರಫ್ತು ₹14,190 ಕೋಟಿಯಿಂದ ₹12,270 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದೆ.

‘ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶದ ಹರಳು ಮತ್ತು ಚಿನ್ನಾಭರಣ ವಲಯದ ವಹಿವಾಟು ಚೇತರಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿ ರಫ್ತು ಬೆಳವಣಿಗೆಯು ಏರಿಕೆ ಕಂಡಿದೆ. ಭಾರತ ಚಿನ್ನಾಭರಣಗಳ ಕೌಶಲ ಮತ್ತು ವಿನ್ಯಾಸವೇ ಇದಕ್ಕೆ ಕಾರಣ. ಈ ವಲಯದ ಸುಸ್ಥಿರ ಬೆಳವಣಿಗೆಗೆ ಒತ್ತು ನೀಡಲಾಗುವುದು’ ಎಂದು ಮಂಡಳಿಯ ಮುಖ್ಯಸ್ಥ ವಿಪುಲ್ ಶಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT