ಮುಂಬೈ: 2020–21ನೇ ಸಾಲಿನಚಿನ್ನದಬಾಂಡ್ನ ನಾಲ್ಕನೇ ಕಂತು ಸೋಮವಾರದಿಂದ ಆರಂಭವಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೀಡಿಕೆ ದರವನ್ನು ಪ್ರತಿ ಗ್ರಾಂಗೆ ₹ 4,852 ನಿಗದಿ ಮಾಡಿದೆ.

ಆನ್ಲೈನ್ ಮೂಲಕಬಾಂಡ್ ಖರೀದಿಗೆ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 4,802 ಇರಲಿದೆ.

2020ರ ಜೂನ್ 6ರಿಂದ 10ರವರೆಗೆಬಾಂಡ್ ಖರೀದಿಗೆ ಅವಕಾಶ ಇರಲಿದೆ.

ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯವರೆಗೆ ಆರು ಕಂತುಗಳಚಿನ್ನದಬಾಂಡ್ ವಿತರಣೆ ಮಾಡುವುದಾಗಿ ಆರ್ಬಿಐ ಏಪ್ರಿಲ್ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಸಮ್ಮುಖದಲ್ಲಿ ಆರ್ಬಿಐ ಈಬಾಂಡ್ಗಳನ್ನು ವಿತರಣೆ ಮಾಡಲಿದೆ.

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿಚಿನ್ನದಬಾಂಡ್ ಯೋಜನೆ ಜಾರಿಗೊಳಿಸಿತು.ಬ್ಯಾಂಕ್ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಎಚ್ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈಬಾಂಡ್ಗಳನ್ನು ಮಾರಾಟ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.